ಬೋಪಣ್ಣ-ಶಪೋವಾಲೊವ್ ಕ್ವಾರ್ಟರ್ ಫೈನಲ್ಗೆ ಲಗ್ಗೆ
ರೋಟರ್ಡಾಮ್ ಓಪನ್ ಟೆನಿಸ್ ಟೂರ್ನಿ
ರೋಟರ್ಡಾಮ್, ಫೆ.12: ಭಾರತದ ರೋಹನ್ ಬೋಪಣ್ಣ ಕೆನಡಾದ ಡೆನಿಸ್ಶಪೋವಾಲೊವ್ ಜೊತೆಗೂಡಿ ರೋಟರ್ಡಾಮ್ಓಪನ್ ಟೆನಿಸ್ ಟೂರ್ನ ಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಇಂಡೋ-ಕೆನಡಾ ಜೋಡಿ ಬೋಪಣ್ಣ-ಶಪೋವಾಲೊವ್ ಎಟಿಪಿ 500 ಟೂರ್ನಿಯಲ್ಲಿ ಪುರುಷರ ಡಬಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಬುಧವಾರ ಆಸ್ಟ್ರೇಲಿಯದ ಜಾನ್ ಪೀರ್ಸ್ ಹಾಗೂ ಮೈಕಲ್ ವೇನಸ್ರನ್ನು 7-6, 6-7, 10-8 ಸೆಟ್ಗಳ ಅಂತರದಿಂದ ರೋಚಕವಾಗಿ ಮಣಿಸಿದರು.
ಬೋಪಣ್ಣ ಹಾಗೂ ಶಪೋವಾಲೊವ್ ಮೊದಲ ಸೆಟನ್ನು ಟೈ-ಬ್ರೇಕ್ನಲ್ಲಿ ಗೆದ್ದುಕೊಂಡರು. ಆದರೆ,ಎರಡನೇ ಸೆಟ್ನಲ್ಲಿ ಸೋತು ಹಿನ್ನಡೆ ಅನುಭವಿಸಿದರು. 39ರ ಹರೆಯದ ಬೋಪಣ್ಣ ತನ್ನೆಲ್ಲಾ ಅನುಭವವನ್ನು ಬಳಸಿಕೊಂಡು ಶಪೋವಾಲೊವ್ ಜೊತೆ ಕೊನೆಯ ತನಕ ಹೋರಾಡಿ 3ನೇ ಸೆಟನ್ನು 10-8 ಅಂತರದಿಂದ ಗೆದ್ದುಕೊಂಡರು. ಬೋಪಣ್ಣ ಹಾಗೂ ಶಪೋವಾಲೊವ್ ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಜೋಡಿ ಜೀನ್-ಜುಲಿಯನ್ ರೋಜರ್ ಹಾಗೂ ಹೊರಿಯಾ ಟೆಕಾವು ಅವರನ್ನು ಎದುರಿಸಲಿದ್ದಾರೆ.
Next Story