ಮೊದಲ ಪಂದ್ಯದಲ್ಲಿ ಮುಂಬೈ-ಚೆನ್ನೈ ಹಣಾಹಣಿ
ಮಾ.29ರಿಂದ ಐಪಿಎಲ್ ಟೂರ್ನಿ
ಮುಂಬೈ, ಫೆ.16: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ಮಾರ್ಚ್ 29ರಂದು ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಎದುರಿಸಲಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಫ್ರಾಂಚೈಸಿಗಳಿಗೆ ಅಂತಿಮ ವೇಳಾಪಟ್ಟ ಕಳುಹಿಸಿದೆ.
ರವಿವಾರ ಮಾತ್ರ ಎರಡು ಪಂದ್ಯಗಳಿರುತ್ತವೆೆ. ಅಂದು ಸಂಜೆ 4 ಮತ್ತು ರಾತ್ರಿ 8 ರಿಂದ ಪಂದ್ಯಗಳು ಪ್ರಾರಂಭವಾಗಲಿವೆೆ. ಉಳಿದ ಎಲ್ಲಾ ದಿನಗಳು ರಾತ್ರಿ 8ರಿಂದ ಪಂದ್ಯಗಳು ಪ್ರಾರಂಭವಾಗುತ್ತದೆ.
ಲೀಗ್ ಹಂತವು 50 ದಿನಗಳವರೆಗೆ ಮುಂದುವರಿಯುತ್ತದೆ ಮತ್ತು ಮೇ 17 ರಂದು ಕೊನೆಗೊಳ್ಳುತ್ತದೆ, ನಂತರ ನಾಕೌಟ್ ಹಂತ ಪ್ರಾರಂಭವಾಗಲಿದೆೆ. ನಾಕೌಟ್ ಹಂತದ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ, ಆದರೆ ಅಂತಿಮ ಪಂದ್ಯವನ್ನು ಮೇ 24 ರಂದು ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನ್ ರಾಯಲ್ಸ್ ಗುವಾಹಟಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಇತರ ಫ್ರಾಂಚೈಸಿಗಳು ತಮ್ಮ ಮೂಲ ಸ್ಥಳಗಳಿಗೆ ಅಂಟಿಕೊಳ್ಳಲು ನಿರ್ಧರಿಸಿಸಿವೆ. ಆದರೆ ರಾಜಸ್ಥಾನ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗಿದ್ದು, ಅಂತಿಮವಾಗಿ ಆರ್ಆರ್ಗೆ ಎರಡು ಪಂದ್ಯಗಳನ್ನು ಜೈಪುರದಿಂದ ಸ್ಥಳಾಂತರಿಸಿ ಗುವಾಹಟಿಯಲ್ಲಿ ಆಡಲು ಸಾಧ್ಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಮುಂದಿನ ಕೆಲವು ವಾರಗಳಲ್ಲಿ ಅಂತಿಮ ನಿರ್ಧಾರವನ್ನು ನಿರೀಕ್ಷಿಸಲಾಗಿದೆ.