ರಣಜಿ ಟ್ರೋಫಿ: ಗುಜರಾತ್ ಸೆಮಿಫೈನಲ್ಗೆ
ವಲ್ಸಾದ್, ಫೆ.23: ಗೋವಾ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ 464 ರನ್ಗಳ ಭರ್ಜರಿ ಜಯ ಗಳಿಸಿರುವ ಗುಜರಾತ್ ತಂಡ ಸೆಮಿಪೈನಲ್ ಪ್ರವೇಶಿಸಿದೆ,
ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದ ನಾಲ್ಕನೇ ದಿನ 629 ರನ್ಗಳ ಸವಾಲನ್ನು ಪಡೆದ ಗೋವಾ ತಂಡ ಎರಡನೇ ಇನಿಂಗ್ಸ್ ನಲ್ಲಿ 164 ರನ್ಗಳಿಗೆ ಆಲೌಟಾಗಿದೆ. ಗುಜರಾತ್ನ ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ (81ಕ್ಕೆ 5) ಮತ್ತು ವೇಗಿ ಅರ್ಝಾನ್ ನಾಗಸ್ವಾಲಾ (18ಕ್ಕೆ4) ದಾಳಿಗೆ ಸಿಲುಕಿದ ಗೋವಾ ಬೇಗನೇ ಇನಿಂಗ್ಸ್ ಮುಗಿಸಿತು.
ಸುಯಾಸ್ ಪ್ರಭುದೇಸಾಯಿ(66) ಇವರನ್ನು ಹೊರತುಪಡಿಸಿದರೆ ಗೋವಾ ತಂಡದ ಯಾರಿಂದಲೂ ಅರ್ಧಶತಕದ ಕೊಡುಗೆ ದೊರೆಯಲಿಲ್ಲ.
ಗೋವಾ ಆರಂಭಿಕ ಬ್ಯಾಟ್ಸ್ಮನ್ ವೈಭವ್ ಗೋವಾಕರ್(4) ಅವರನ್ನು ಬೇಗನೆ ಕಳೆದುಕೊಂಡಿತು. ರೋಶ್ ಕಲಾರಿಯಾ (21ಕ್ಕೆ 1) ಗೋವಾದ ಮೊದಲ ವಿಕೆಟ್ ಉಡಾಯಿಸಿದರು. 5 ರನ್ ಸೇರಿಸುವಷ್ಟರಲ್ಲಿ ಮೊದಲ ವಿಕೆಟ್ನ್ನು ಕಳೆದುಕೊಂಡ ಗೋವಾ ತಂಡ ಸುಮೇರಿಯನ್ ಅಮೊನ್ಕಾರ್ (5) ಔಟಾಗುವುದರೊಂದಿಗೆ 10ಕ್ಕೆ 2 ವಿಕೆಟ್ ಕಳೆದುಕೊಂಡಿತು.
13ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಗೋವಾ ತಂಡಕ್ಕೆ ಪ್ರಭುದೇಸಾಯಿ(66) ಮತ್ತು ಸ್ನೇಹಲ್ ಕೌತಾಂಕರ್(17) ರಕ್ಷಣೆ ನಿಡಲು ಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ.