ಐಪಿಎಲ್: ರಾಜಸ್ಥಾನದ 2 ಪಂದ್ಯಗಳು ಗುವಾಹಟಿಯಲ್ಲಿ
ಹೊಸದಿಲ್ಲಿ,ಫೆ.27: ಮುಂಬರುವ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ(ಐಪಿಎಲ್) ಗುವಾಹಟಿಯ ಬರ್ಸಪಾರಾ ಸ್ಟೇಡಿಯಂ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡದ ಮೊದಲೆರಡು ತವರು ಪಂದ್ಯಗಳ ಆತಿಥ್ಯವಹಿಸಲಿದೆ ಎಂದು ಬಿಸಿಸಿಐ ಗುರುವಾರ ತಿಳಿಸಿದೆ.
‘‘ರಾಜಸ್ಥಾನ ರಾಯಲ್ಸ್ ತಂಡ ಗುವಾಹಟಿಯಲ್ಲಿ ಕ್ರಮವಾಗಿ ಎ.5 ಹಾಗೂ 9ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಎರಡೂ ಪಂದ್ಯಗಳು ರಾತ್ರಿ 8 ಗಂಟೆಗೆ ನಡೆಯಲಿವೆೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ತಿಳಿಸಿದ್ದಾರೆ.
ರಾಜಸ್ಥಾನ ತಂಡ ತನ್ನ ಉಳಿದ ಐದು ತವರು ಪಂದ್ಯಗಳನ್ನು ಜೈಪುರದ ತವರು ಮೈದಾನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಆಡಲಿದೆ.
Next Story