ಬಾಂಗ್ಲಾದೇಶದ ಪಾಕಿಸ್ತಾನ ಪ್ರವಾಸ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಕರಾಚಿ, ಮಾ.16: ಜಾಗತಿಕ ಮಟ್ಟದಲ್ಲಿ ಕ್ರೀಡಾ ಕ್ಯಾಲೆಂಡರ್ಗಳನ್ನು ಬುಡಮೇಲು ಮಾಡಿರುವ ಕೋವಿಡ್-19 ವೈರಸ್ನಿಂದಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳು ಮುಂಬರುವ ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಸೋಮವಾರ ನಿರ್ಧರಿಸಿವೆ.
ಬಾಂಗ್ಲಾದೇಶ ತಂಡ ಎಪ್ರಿಲ್ 1ರಂದು ನಡೆಯಲಿರುವ ಏಕದಿನ ಪಂದ್ಯವನ್ನಾಡಲು ಮಾ.29ಕ್ಕೆ ಕರಾಚಿಗೆ ಆಗಮಿಸಬೇಕಾಗಿತ್ತು. ಎರಡನೇ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಎ.9ರಿಂದ 5ರ ತನಕ ನಿಗದಿಯಾಗಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ ಫೆ.7ರಿಂದ 10ರ ತನಕ ನಡೆದಿದ್ದು, ಪಾಕಿಸ್ತಾನ ಈ ಪಂದ್ಯವನ್ನು ಇನಿಂಗ್ಸ್ ಹಾಗೂ 44 ರನ್ಗಳಿಂದ ಗೆದ್ದುಕೊಂಡಿತ್ತು. ಮಾ.24ರಿಂದ ಆರಂಭವಾಗಬೇಕಾಗಿದ್ದ ಪಾಕಿಸ್ತಾನ ಕಪ್ ಏಕದಿನ ಟೂರ್ನಿಯನ್ನು ಪಿಸಿಬಿ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಪಿಸಿಬಿ ಈಗಾಗಲೇ ಪಾಕಿಸ್ತಾನ ಸೂಪರ್ ಲೀಗ್ನ ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಿದೆ.
Next Story