ಕೇರಳದ 12ರ ಬಾಲಕನ ಮೆಸ್ಸಿ ಶೈಲಿಯ ಫ್ರೀ ಕಿಕ್ ವೀಡಿಯೊ ವೈರಲ್
ತಿರುವನಂತಪುರ, ಮೇ 5: ಗೋಲುಪೆಟ್ಟಿಗೆ ಮೇಲಿನ ಬಲ ಮೂಲೆಯಲ್ಲಿ ನೇತುಹಾಕಿರುವ ರಿಂಗ್ನೊಳಗೆ ಚೆಂಡನ್ನು ಒದೆಯುವ ಮಲಪ್ಪುರಂನ 12 ವರ್ಷದ ಬಾಲಕನ ಮೆಸ್ಸಿ ಶೈಲಿಯ ಫ್ರೀ ಕಿಕ್ ವೀಡಿಯೊ ವೈರಲ್ ಆಗಿದೆ.
ಆಲ್ ಕೇರಳ ಸೆವೆನ್ಸ್ ಫುಟ್ಬಾಲ್ ಸಂಸ್ಥೆ ಫೇಸ್ಬುಕ್ ಪುಟದಲ್ಲಿ ಅರ್ಜೆಂಟೀನ ಸ್ಟಾರ್ ಮೆಸ್ಸಿಯ ಟೀ ಶರ್ಟ್ ಧರಿಸಿದ್ದ ಬಾಲಕನೊಬ್ಬ ಚೆಂಡನ್ನು ಫ್ರೀಕಿಕ್ ಮಾಡುವ ದ್ಯಶ್ಯವನ್ನು ಅಪ್ಲೋಡ್ ಮಾಡಿದೆ.
ಫ್ರೀಕಿಕ್ನಿಂದ ಗಮನ ಸೆಳೆದಿರುವ ಕಟ್ಟುಮುಂಡ ಸರಕಾರಿ ಸೆಕೆಂಡರಿ ಯುಪಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಮಿಶಾಲ್ ಅಬೂ ಲೈಸ್ಗೆ ಮೆಸ್ಸಿ ಫೇವರಿಟ್ ಆಟಗಾರ. ಕ್ರಿಸ್ಟಿಯಾನೊ ರೊನಾಲ್ಡೊ ಎರಡನೇ ನೆಚ್ಚಿನ ಆಟಗಾರ. ಮಿಶಾಲ್ ಗೆ ಸಹೋದರ ವಾಜಿದ್ ಕ್ರೀಡೆ ಆಯ್ದುಕೊಳ್ಳಲು ಉತ್ತೇಜನ ನೀಡಿದ್ದರು. ಕಳೆದ 4 ವರ್ಷಗಳಿಂದ ಸಹೋದರನಿಗೆ ಕೋಚಿಂಗ್ ನೀಡುತ್ತಿರುವ ವಾಜಿದ್ ತನ್ನ ಸಹೋದರನ ಫ್ರೀಕಿಕ್ ವೀಡಿಯೊವನ್ನು ಸೆರೆ ಹಿಡಿದಿದ್ದಾರೆ.
ಮೆಸ್ಸಿ ಸ್ವತಃ ಎದುರಾಳಿ ಗೋಲ್ಕೀಪರ್ರನ್ನು ವಂಚಿಸಿ ಗೋಲುಪೆಟ್ಟಿಗೆಯ ಮೂಲೆಯಲ್ಲಿ ಫ್ರೀಕಿಕ್ ಮೂಲಕ ಗೋಲು ದಾಖಲಿಸುವಲ್ಲ್ಲಿ ಹೆಸರುವಾಸಿಯಾಗಿದ್ದಾರೆ.
A budding footballer from Kerala recreating a free kick of Lionel Messi. #LionelMessi #Argentina #FCBarcelona pic.twitter.com/SSXn1kbekN
— The Kitemaker آغا طارق (@AgaThariq) May 3, 2020