ಗೆಟಾಫೆಯನ್ನು ಬಗ್ಗುಬಡಿದ ರಿಯಲ್ ಮ್ಯಾಡ್ರಿಡ್
ಪ್ರಶಸ್ತಿಯ ಸನಿಹಕ್ಕೆ ಸೆರ್ಗಿಯೊ ರಾಮೊಸ್ ತಂಡ
ಮ್ಯಾಡ್ರಿಡ್, ಜು.3: ಸೆರ್ಗಿಯೊ ರಾಮೊಸ್ ತಡವಾಗಿ ಬಾರಿಸಿದ ಪೆನಾಲ್ಟಿ ಗೋಲು ನೆರವಿನಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಇಲ್ಲಿ ನಡೆದ ಪಂದ್ಯದಲ್ಲಿಗೆಟಾಫೆ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿದೆ.
ಈ ಗೆಲುವಿನೊಂದಿಗೆ ನಾಲ್ಕು ಅಂಕಗಳನ್ನು ತನ್ನ ಖಾತೆಗೆ ಸೇರಿಸಿರುವ ರಿಯಲ್ ಮ್ಯಾಡ್ರಿಡ್ ತಂಡ ಲಾ ಲಿಗಾದ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಒಟ್ಟು 33 ಪಂದ್ಯಗಳಲ್ಲಿ 22 ಜಯ ಗಳಿಸಿದೆ. 8 ಡ್ರಾ ಮತ್ತು 3 ಪಂದ್ಯಗಳನ್ನು ಕಳೆದುಕೊಂಡಿದ್ದು 74 ಅಂಕಗಳನ್ನು ಗಳಿಸಿದೆ.
ಇದೇ ವೇಳೆ ಬಾರ್ಸಿಲೋನ ತಂಡ 33 ಪಂದ್ಯಗಳಲ್ಲಿ 21 ಗೆಲುವು, 7 ಡ್ರಾ, 5 ಸೋಲು ಮತ್ತು 70 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ. ಮ್ಯಾಡ್ರಿಡ್ ಮತ್ತು ಬಾರ್ಸಿಲೋನ ಪ್ರಶಸ್ತಿ ಎತ್ತಲು ಪೈಪೋಟಿ ನಡೆಸುತ್ತಿವೆ. ರಿಯಲ್ ಮ್ಯಾಡ್ರಿಡ್ ನಾಯಕ ಸೆರ್ಗಿಯೊ ರಾಮೊಸ್ (79ನೇ ನಿಮಿಷ) ಅವರು ತಡವಾಗಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಕಬಳಿಸಿ ಗೆಟಾಫೆ ವಿರುದ್ಧ 1-0 ಅಂತರದ ಗೆಲುವು ಸಾಧಿಸಲು ನೆರವಾದರು. ಮ್ಯಾಡ್ರಿಡ್ ಸತತ ಆರನೇ ಗೆಲುವು ಸಾಧಿಸಿತು . 2016-17ರ ನಂತರ ಪ್ರಶಸ್ತಿಯನ್ನು ಗೆಲ್ಲದ ರಿಯಲ್ ಮ್ಯಾಡ್ರಿಡ್ ಪ್ರಶಸ್ತಿಯ ಬರ ಎದುರಿಸುತ್ತಿದೆ .