ಟೆಸ್ಟ್ ಕ್ರಿಕೆಟ್ ನಲ್ಲಿ ಧೋನಿ ಯಶಸ್ಸಿಗೆ ಝಹೀರ್ ಖಾನ್ ಕಾರಣ: ಗೌತಮ್ ಗಂಭೀರ್
ಹೊಸದಿಲ್ಲಿ: ಟೆಸ್ಟ್ ಕ್ರಿಕೆಟ್ ನಲ್ಲಿ ಧೋನಿ ಯಶಸ್ವಿ ನಾಯಕನಾಗುವ ಹಿಂದೆ ಝಹೀರ್ ಖಾನ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
“ಝಹೀರ್ ಖಾನ್ ಕಾರಣದಿಂದಾಗಿ ಧೋನಿ ಟೆಸ್ಟ್ ಕ್ರಿಕೆಟ್ ನಲ್ಲಿ ಯಶಸ್ವಿ ನಾಯಕನಾದರು. ಧೋನಿಗೆ ಸಿಕ್ಕ ದೊಡ್ಡ ಆಸ್ತಿ ಅವರು. ಇದರ ಕ್ರೆಡಿಟ್ ಸೌರವ್ ಗಂಗೂಲಿಗೆ ಸೇರಬೇಕು. ನನ್ನ ಪ್ರಕಾರ ಝಹೀರ್ ಖಾನ್ ಭಾರತದ ಅತ್ಯುತ್ತಮ ವಿಶ್ವದರ್ಜೆಯ ಬೌಲರ್ “ ಎಂದವರು ಹೇಳಿದರು.
ಧೋನಿ ನಾಯಕತ್ವದಡಿ ಝಹೀರ್ 33 ಟೆಸ್ಟ್ ಪಂದ್ಯಗಳನ್ನಾಡಿದ್ದು, 123 ವಿಕೆಟ್ ಗಳನ್ನು ಗಳಿಸಿದ್ದಾರೆ. ಈ ಇಬ್ಬರ ಜೋಡಿ ತಂಡದಲ್ಲಿರುವಾಗಲೇ 2009ರಲ್ಲಿ ಭಾರತ ತಂಡ ಟೆಸ್ಟ್ ರ್ಯಾಂಕಿಗ್ ನಲ್ಲಿ ಪ್ರಪ್ರಥಮ ಬಾರಿಗೆ ಅಗ್ರಸ್ಥಾನಕ್ಕೇರಿತ್ತು.
Next Story