ಬಾರ್ಸಿಲೋನಕ್ಕೆ ಲಾ ಲಿಗಾ ಪ್ರಶಸ್ತಿ ‘ಬಹುತೇಕ ಅಸಾಧ್ಯ’ : ಸುಯೆರೆಝ್
ಮ್ಯಾಡ್ರಿಡ್: ಬಾರ್ಸಿಲೋನ ಫಾರ್ವರ್ಡ್ ಉರುಗ್ವೆಯ ಲೂಯಿಸ್ ಸುಯೆರೆಝ್ ಪ್ರತಿಸ್ಪರ್ಧಿ ರಿಯಲ್ ಮ್ಯಾಡ್ರಿಡ್ ಲಾಲಿಗಾ ಪ್ರಶಸ್ತಿ ಗೆಲ್ಲುವುದನ್ನು ಒಪ್ಪಿಕೊಂಡಿದ್ದಾರೆ. ಬಾರ್ಸಿಲೋನಕ್ಕೆ ಟ್ರೋಫಿಯನ್ನು ಉಳಿಸಿಕೊಳ್ಳುವುದು ‘ಬಹುತೇಕ ಅಸಾಧ್ಯ’ ಎಂದು ಹೇಳಿದ್ದಾರೆ.
ಬಾರ್ಸಿಲೋನಕ್ಕಿಂತ ರಿಯಲ್ ಮ್ಯಾಡ್ರಿಡ್ 4 ಹೆಚ್ಚು ಪಾಯಿಂಟ್ಸ್ ಪಡೆದಿದೆ. 36 ಪಂದ್ಯಗಳಲ್ಲಿ ಪಾಯಿಂಟ್ಸ್ ಗಳಿಸಿದೆ. ಆದರೆ ಬಾರ್ಸಿಲೋನ 79 ಪಾಯಿಂಟ್ಸ್ ಪಡೆದಿದೆ. ಕಳೆದ ತಿಂಗಳು ಸೆಲ್ಟಾ ವಿಗೊ ಮತ್ತು ಬಾರ್ಸಿಲೋನ ತಂಡಗಳ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡ ಹಿನ್ನೆಲೆಯಲ್ಲಿ ಬಾರ್ಸಿಲೋನದ ಪ್ರಶಸ್ತಿಯ ಹಾದಿ ಬಹುತೇಕ ಬಂದ್ ಆಗಿತ್ತು. ಎಂದು ಸುಯೆರೆಝ್ ಅಭಿಪ್ರಾಯಪಟ್ಟರು.
‘‘ನಾವು ಸೆಲ್ಟಾ ತಂಡವನ್ನು ಸೋಲಿಸಿದ್ದರೆ, ಅಟ್ಲೆಟಿಕೊ ವಿರುದ್ಧ ಉತ್ತಮವಾಗಬಹುದಿತ್ತು. ಕೊನೆಯ ನಿಮಿಷದಲ್ಲಿ ಆಸ್ಪಾಸ್ನ ಗೋಲು ನಮಗೆ ನೋವುಂಟು ಮಾಡಿತು. ಈಗ ನಾವು ಉತ್ತಮವಾಗಿ ಆಟವನ್ನು ಮುಗಿಸಿ ಚಾಂಪಿಯನ್ಸ್ ಲೀಗ್ಗೆ ಹೋಗಬೇಕಾಗಿದೆ’’ಎಂದರು.
Next Story