ಸತತ 9ನೇ ಬಾರಿ ಸೀರಿ ಎ ಪ್ರಶಸ್ತಿ ಜಯಿಸಿದ ಜುವೆಂಟಸ್
ರೊನಾಲ್ಡೊ ಕಾಲ್ಚಳಕ
ಮಿಲಾನ್:ಸ್ಯಾಂಪ್ಡೋರಿಯಾ ವಿರುದ್ಧ 2-0 ಗೋಲುಗಳ ಅಂತರದ ಜಯ ಸಾಧಿಸಿದ ಜುವೆಂಟಸ್ ತಂಡ ರವಿವಾರ ಸತತ 9ನೇ ಬಾರಿ ಸೀರಿ ಎ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮೊದಲಾರ್ಧದ 45+7ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಫೆಡೆರಿಕೊ ಬರ್ನಾರ್ಡೆಸ್ಚಿ 67ನೇ ನಿಮಿಷದಲ್ಲಿ ತಂಡದ ಪರ ಎರಡನೆಯ ಗೋಲು ಗಳಿಸಿದರು.
ಐದು ಬಾರಿಯ ಬ್ಯಾಲನ್ ಡಿ’ ಓರ್ ವಿಜೇತ ರೊನಾಲ್ಡೊ ತಂಡ ಇಂಟರ್ ಮಿಲಾನ್ನ್ನು ಏಳು ಪಾಯಿಂಟ್ಗಳ ಅಂತರದಲ್ಲಿ ಹಿಂದಿಕ್ಕಿ ಪ್ರಶಸ್ತಿಯನ್ನು ಬಾಚಿಕೊಂಡಿತು. ಜುವೆಂಟಸ್ ಆಡಿರುವ 36 ಪಂದ್ಯಗಳಲ್ಲಿ 26 ಗೆಲುವಿನೊಂದಿಗೆ 83 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತು. ಆದರೆ ಇಂಟರ್ ಮಿಲಾನ್ 36 ಪಂದ್ಯಗಳಲ್ಲಿ 22 ಗೆಲುವು ದಾಖಲಿಸಿ76 ಪಾಯಿಂಟ್ಸ್ ಪಡೆದಿದೆ.
Next Story