ಸೆರೆನಾಗೆ ಜಯ , ಬೋಪಣ್ಣ-ಶಪಾವಲೋವ ಕ್ವಾರ್ಟರ್ ಫೈನಲ್ಗೆ
ಯುಎಸ್ ಓಪನ್
ನ್ಯೂಯಾರ್ಕ್, ಸೆ.6: ಅಮೆರಿಕದ ಮಹಿಳಾ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ನ ಮೂರನೇ ಸುತ್ತಿನಲ್ಲಿ ಜಯ ಗಳಿಸುವ ಮೂಲಕ 24ನೇ ಗ್ರಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿದ್ದಾರೆ.
ಮಹಿಳೆಯರ ಟೆನಿಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ 2017ರ ಚಾಂಪಿಯನ್ ಸ್ಲೋಯೆನ್ ಸ್ಟೀಫನ್ಸ್ ಅವರನ್ನು 2-6, 6-2, 6-2 ಅಂತರದಿಂದ ಮಣಿಸಿದರು.
ಮೊದಲ ಸೆಟ್ನಲ್ಲಿ ಸೆರೆನಾ ಹಿನ್ನಡೆ ಅನುಭವಿಸಿದ್ದರೂ ಎರಡು ಮತ್ತು ಮೂರನೇ ಸೆಟ್ನಲ್ಲಿ ತಿರುಗೇಟು ನೀಡಿ ಗೆಲುವನ್ನು ತನ್ನದಾಗಿಸಿಕೊಂಡರು.
ಯುಎಸ್ ಓಪನ್ ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ಭಾರತದ ಹಿರಿಯ ಆಟಗಾರ ರೋಹನ್ ಬೋಪಣ್ಣ ಮತ್ತು ಅವರ ಕೆನಡಾದ ಜೊತೆಗಾರ ಡೆನಿಸ್ ಶಪಾವಲೋವ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ರೋಹನ್ ಬೋಪಣ್ಣ ಮತ್ತು ಅವರ ಕೆನಡಾದ ಪಾಲುದಾರ ಡೆನಿಸ್ ಶಪಾವಲೋವ ಅವರು ಆರನೇ ಶ್ರೇಯಾಂಕದ ಆಟಗಾರರಾದ ಜರ್ಮನಿಯ ಕೆವಿನ್ ಕ್ರಾವಿಯೆಟ್ಜ್ ಮತ್ತು ಆಂಡ್ರಿಯಾಸ್ ಮೈಸ್ ಅವರನ್ನು 4-6, 6-4, 6-3 ಸೆಟ್ಗಳಿಂದ ಸೋಲಿಸಿದರು. ಎರಡನೇ ಸುತ್ತಿನ ಮುಖಾಮುಖಿಯು ಒಂದು ಗಂಟೆ 47 ನಿಮಿಷಗಳ ಕಾಲ ನಡೆಯಿತು. ಬೋಪಣ್ಣ ಮತ್ತು ಶಪಾವಲೋವ ಕ್ವಾರ್ಟರ್ ಫೈನಲ್ನಲ್ಲಿ ಡಚ್-ರೊಮೇನಿಯದ ಜೋಡಿ ಜೀಲ್-ಜೂಲಿಯನ್ ರೋಜರ್ ಮತ್ತು ಹೋರಿಯಾ ಟೆಕಾವು ಅವರನ್ನು ಎದುರಿಸಲಿದ್ದಾರೆ.
ಸುಮಿತ್ ನಾಗಲ್ ಮತ್ತು ಡಿವಿಜ್ ಶರಣ್ ಅವರ ನಿರ್ಗಮನದ ನಂತರ ಭಾರತದ ಪರ ಟೂರ್ನಿಯಲ್ಲಿ ಬೋಪಣ್ಣ ಮಾತ್ರ ಉಳಿದಿದ್ದಾರೆ.