ಪ್ರೊ ಕಬಡ್ಡಿ ಲೀಗ್ ; ಟೈಟನ್ಸ್ಗೆ ಮಣಿದ ಬುಲ್ಸ್
ತವರಿನಲ್ಲಿ ಮೊದಲ ಆಘಾತ
ಬೆಂಗಳೂರು, ಜು.12: ಉದ್ಯಾನನಗರಿಯಲ್ಲಿ ಇಂದು ನಡೆದ ಪ್ರೊ ಕಬಡ್ಡಿ ಟೂರ್ನಮೆಂಟ್ನ ಬೆಂಗಳೂರು ಆವೃತ್ತಿಯ ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಸೋಲು ಅನುಭವಿಸಿದೆ.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೂಟದ 29ನೆ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ತೆಲುಗು ಟೈಟನ್ಸ್ 32-24 ಅಂತರದಲ್ಲಿ ಜಯ ಸಾಧಿಸಿತು.
ಟೈಟನ್ಸ್ ತಂಡವನ್ನು ತವರಲ್ಲಿ ಮಣಿಸಿದ ಬುಲ್ಸ್ ಇಲ್ಲಿ ಆಘಾತ ಅನುಭವಿಸಿತು. ಟೈಟನ್ಸ್ ತಂಡದ ನಾಯಕ ರಾಹುಲ್ ಚೌಧರಿ 9 ಪಾಯಿಂಟ್ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಚೌಧರಿ ಬೆಸ್ಟ್ ರೈಡರ್ ಮತ್ತು ಸಂದೀಪ್ ನರ್ವಾಲ್(5) ಡಿಫೆಂಡರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
ಬುಲ್ಸ್ ತಂಡದ ರೋಹಿತ್ ಕುಮಾರ್(9) ಮತ್ತು ಆಶೀಶ್ ಕುಮಾರ್(7) ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ. ಇದರೊಂದಿಗೆ ಕರ್ನಾಟಕ ತಂಡ ತಾನಾಡಿದ 8ನೆ ಪಂದ್ಯದಲ್ಲಿ 4ನೆ ಸೋಲು ಅನುಭವಿಸಿತು. ಒಟ್ಟು 3 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೆ ಸ್ಥಾನ ಪಡೆದಿದೆ.
ಟೈಟನ್ಸ್ ತಂಡ 8 ಪಂದ್ಯಗಳಲ್ಲಿ 4ರಲ್ಲಿ ಜಯ ಗಳಿಸಿ 24 ಅಂಕಗಳೊಂದಿಗೆ 4ನೆ ಸ್ಥಾನ ಪಡೆದಿದೆ.
ಪುನೇರಿ -ಬೆಂಗಾಲ್ ಪಂದ್ಯ ಡ್ರಾ: ಪುನೇರಿ ಪಲ್ಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳ ನಡುವೆ ನಡೆದ 30ನೆ ಪಂದ್ಯ 34-34 ಅಂಕಗಳೊಂದಿಗೆ ಡ್ರಾದಲ್ಲಿಕೊನೆಗೊಂಡಿದೆ.