ಪ್ರೊ ಕಬಡ್ಡಿ; ಪಾಟ್ನಾ ಪೈರೆಟ್ಸ್ ಗೆ ರೋಚಕ ಜಯ
ಹೊಸದಿಲ್ಲಿ, ಜು.25: ನಾಯಕ ಮೆಹರಾಜ್ ಶೇಕ್ ಅವರು ಅತ್ಯುತ್ತಮ ಪ್ರದರ್ಶನ ದಬಾಂಗ್ ಡೆಲ್ಲಿಯ ಸಹಾಯಕ್ಕೆ ಬರಲಿಲ್ಲ. ಇಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ 52ನೆ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಪಾಟ್ನಾ ಪೈರೆಟ್ಸ್ 32-31 ಅಂತರದಲ್ಲಿ ಜಯ ಗಳಿಸಿದೆ.
ಪಾಟ್ನಾ ತಂಡದ ನಾಯಕ ಪ್ರದೀಪ್ ನರ್ವಾಲ್ (9 ಅಂಕ ) ಮತ್ತು ರಾಜೇಶ್ ಮಂಡಲ್ (7 ಅಂಕ) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮೆಹರಾಜ್ ಅವರು ಪಂದ್ಯದ ಆರಂಭದಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ಡೆಲ್ಲಿ ತಂಡದ ಹಿನ್ನಡೆಗೆ ಕಾರಣವಾಯಿತು. ಪಾಟ್ನಾ ಈ ಗೆಲುವಿನೊಂದಿಗೆ 52 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಫೈರ್ ಬರ್ಡ್ಸ್ ಫೈನಲ್ಗೆ : ಮಹಿಳೆಯರ ಕಬಡ್ಡಿ ಲೀಗ್ ಟೂರ್ನಿಯ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ಐಸ್ ದಿವಾಸ್ ವಿರುದ್ಧ ಫೈರ್ ಬರ್ಡ್ಸ್ 22-13 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದೆ.
ಫೈರ್ ಬರ್ಡ್ಸ್ ತಂಡದ ಗಾಯತ್ರಿ ಮತ್ತು ರಿಂಜು ಕೆ ತಲಾ 4 ಅಂಕಗಳನ್ನು ಜಮೆ ಮಾಡಿದರು. ದಿವಾಸ್ ತಂಡದ ಸೊನಾಲಿ, ಖುಶುಬು ನರ್ವಾಲ್ ಮತ್ತು ಸುಮಿತ್ರಾ ಶರ್ಮ ತಲಾ 3 ಅಂಕಗಳನ್ನು ತಂಡದ ಖಾತೆಗೆ ಜಮೆ ಮಾಡಿದರು.