ನಲುವತ್ತೆಂಟು ವರ್ಷಗಳ ಬಳಿಕ ಚಿನ್ನ ಜಯಿಸಿದ ಆಸ್ಟ್ರೇಲಿಯದ ಮೊದಲ ಈಜುಗಾರ ಕೈಲ್ ಚಾಲ್ಮರ್ಸ್
ರಿಯೋ ಡಿ ಜನೈರೊ, ಆ.11:ರಿಯೋ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯದ ಹದಿನೆಂಟರ ಹರೆಯದ ಈಜುಪಟು ಕೈಲ್ ಚಾಲ್ಮರ್ಸ್ ಚಿನ್ನ ಜಯಸುವ ಮೂಲಕ 48 ವರ್ಷಗಳಲ್ಲಿ ಪುರುಷರ 100 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿರುವ ಆಸ್ಟ್ರೇಲಿಯದ ಮೊದಲ ಈಜುಪಟು ಎನಿಸಿಕೊಂಡಿದ್ದಾರೆ.
ಬುಧವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಕೈಲ್ ಅವರು ಬೆಲ್ಜಿಯಂನ ಪೀಟರ್ ಟಿಮ್ಮರ್ಸ್ (47.80 ಸೆ.) ಹಿಂದಿಕ್ಕಿ ಚಿನ್ನ ಪಡೆದರು. ಕೈಲ್ 47.58 ಸೆಕಂಡ್ ಗಳಲ್ಲಿ ದಡ ಸೇರಿ ಚಿನ್ನ ಬಾಚಿಕೊಂಡರು. ಹಾಲಿ ಚಾಂಪಿಯನ್ ಅಮೆರಿಕದ ನಥನ್ ಆಡ್ರಿಯನ್ (47.85 ಸೆ.) ಕಂಚು ಪದಕವನ್ನು ತನ್ನದಾಗಿಸಿಕೊಂಡರು.
Next Story