ಒಲಿಂಪಿಕ್ಸ್ ನಲ್ಲಿ ವೇಗದ ಗೋಲು ದಾಖಲೆ ಬರೆದ ನೇಮರ್
ಹೊಂಡುರಾಸ್ ನ್ನು ಮಣಿಸಿದ ಬ್ರೆಝಿಲ್ ಫೈನಲ್ ಗೆ
ರಿಯೋ ಡಿ ಜನೈರೊ, ಆ.18: ಆಟ ಆರಂಭಗೊಂಡ ಹದಿನೈದು ಸೆಕೆಂಡ್ಗಳಲ್ಲಿ ಗೋಲು ಬಾರಿಸುವ ಮೂಲಕ ಬ್ರೆಝಿಲ್ ತಂಡದ ಸ್ಟಾರ್ ಆಟಗಾರ ನೇಮರ್ ಒಲಿಂಪಿಕ್ಸ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ರಿಯೋ ಒಲಿಂಪಿಕ್ಸ್ ಸೆಮಿಫೈನಲ್ ಪಂದ್ಯದಲ್ಲಿ ನೇಮರ್ ವೇಗದ ಗೋಲು ದಾಖಲಿಸಿದರು. ಈ ಗೋಲು ನೆರವಿನಲ್ಲಿ ಬ್ರೆಝಿಲ್ ತಂಡ ಹೊಂಡುರಾಸ್ ನ್ನು 6-0 ಗೋಲುಗಳಿಂದ ಬಗ್ಗುಬಡಿದು ಫೈನಲ್ ಪ್ರವೇಶಿಸಿತು.ಫೈನಲ್ನಲ್ಲಿ ಬ್ರೆಝಿಲ್ ವಿಶ್ವ ಚಾಂಪಿಯನ್ ಜರ್ಮನಿ ತಂಡವನ್ನು ಎದುರಿಸಲಿದೆ. ಜರ್ಮನಿ ತಂಡ ನೈಜೀರಿಯವನ್ನು ಮಣಿಸಿ ಫೈನಲ್ ತಲುಪಿದೆ.
Next Story