ಜಿಮ್ನಾಸ್ಟಿಕ್ ಸಾಧಕಿ ದೀಪಾ ತವರಿಗೆ ಆಗಮನ
ಹೊಸದಿಲ್ಲಿ, ಆ.20: ರಿಯೋ ಒಲಿಂಪಿಕ್ಸ್ ನ ಜಿಮ್ನಾಸ್ಟಿಕ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನಕ್ಕೆ ಪಡೆದಿದ್ದ ತ್ರಿಪುರಾದ ದೀಪಾ ಕರ್ಮಾಕರ್ ಶನಿವಾರ ಮುಂಜಾನೆ ತವರಿಗೆ ಆಗಮಿಸಿದರು.
ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಚ್ ಬಿಶೇಶ್ವರ್ ನಂದಿ ಜೊತೆಗೆ ಆಗಮಿಸಿದ ದೀಪಾ ಕರ್ಮಾಕರ್ ಅವರಿಗೆ ಕುಟುಂಬಸ್ಥರು, ಸ್ನೇಹಿತರು, ಕ್ರೀಡಾ ಸಚಿವಾಲಯ ಮತ್ತು ಜಿಮ್ನಾಸ್ಟಿಕ್ ಸಂಸ್ಥೆಯ ಅಧಿಕಾರಿಗಳು ಭವ್ಯ ಸ್ವಾಗತ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೀಪಾ, ‘ಏಳೋ ಅಥವಾ ಎಂಟನೇ ಸ್ಥಾನ ಬಗ್ಗೆ ಯೋಚಿಸಿದ್ದೆ . ನಾಲ್ಕನೇ ಸ್ಥಾನ ಸಿಕ್ಕಿದೆ. ಇದರಿಂದಾಗಿ ತುಂಬಾ ಖುಷಿಯಾಗಿದೆ. ನಾಲ್ಕು ವರ್ಷಗಳ ಬಳಿಕ ನಡೆಯುವ ಮುಂದಿನ ಒಲಿಂಪಿಕ್ಸ್ನಲ್ಲಿ ಸ್ವರ್ಣ ಗೆಲ್ಲುವೆ ”ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ದೀಪಾ ಇಂದು ಸಂಜೆ ತನ್ನ ತವರು ತ್ರಿಪುರಾಕ್ಕೆ ತೆರಳುವ ಸಾಧ್ಯತೆ ಇದೆ.
Next Story