ಲೀ ಚೊಂಗ್ಗೆ ಆರನೆ ಜಪಾನ್ ಓಪನ್ ಕಿರೀಟ
ಜಪಾನ್ ಓಪನ್
ಕೌಲಾಲಂಪುರ, ಸೆ.25: ಡೆನ್ಮಾರ್ಕ್ನ ಜಾನ್ ಒ’ಜಾರ್ಜನ್ಸನ್ರನ್ನು ಮಣಿಸಿದ ಮಲೇಷ್ಯಾದ ಲೀ ಚೊಂಗ್ ವೀ ಜಪಾನ್ ಓಪನ್ನಲ್ಲಿ ಆರನೆ ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಕಳೆದ ಮೂರು ಒಲಿಂಪಿಕ್ಸ್ಗಳಲ್ಲಿ ಬೆಳ್ಳಿ ಪದಕ ಜಯಿಸಿರುವ ಲೀ ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಡೆನ್ಮಾರ್ಕ್ ಆಟಗಾರನ ವಿರುದ್ಧ 21-18, 15-21, 21-16 ಗೇಮ್ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ವಿಶ್ವದ ನಂ.1 ಆಟಗಾರ ಲೀ ಒಂದೂ ಗೇಮ್ನ್ನು ಸೋಲದೇ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಗೆ ತಲುಪಿದ್ದರು. ಲೀ 6ನೆ ಬಾರಿ ಪ್ರಶಸ್ತಿಯನ್ನು ಜಯಿಸಿದ್ದು, ಈ ಹಿಂದೆ 2014, 2013, 2012, 2010 ಹಾಗೂ 2007ರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಮಹಿಳೆಯರ ಸಿಂಗಲ್ಸ್ನಲ್ಲಿ ಚೀನಾದ ಹೀ ಬಿಂಗ್ಜಿಯಾವೊ ತಮ್ಮದೇ ದೇಶದ ಸನ್ ಯೂರನ್ನು 21-14, 7-21, 21-18 ಸೆಟ್ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
Next Story