ಎಟಿಪಿ ಚೆನ್ನೈ ಓಪನ್: ಸೋಮ್ದೇವ್,ಸಾಕೇತ್ ಶುಭಾರಂಭ
ಚೆನ್ನೈ, ಜ.2: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರರಾದ ಸೋಮ್ದೇವ್ ದೇವ್ವರ್ಮನ್ ಹಾಗೂ ಸಾಕೇತ್ ಮೈನೇನಿ ಎಟಿಪಿ ಚೆನ್ನೈ ಓಪನ್ನ ಅರ್ಹತಾ ಟೂರ್ನಿಯಲ್ಲಿ ಎರಡನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಶನಿವಾರ ನಡೆದ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಆರನೆ ಶ್ರೇಯಾಂಕದ ಸೋಮ್ದೇವ್ ತಮ್ಮದೇ ದೇಶದ ವಿಜಯ್ ಸುಂದರ್ ಪ್ರಶಾಂತ್ರನ್ನು 6-2, 6-3 ಸೆಟ್ಗಳ ಅಂತರದಿಂದ ಮಣಿಸಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ 5ನೆ ಶ್ರೇಯಾಂಕದ ಮೈನೇನಿ ಅವರು ಸನಮ್ ಸಿಂಗ್ರನ್ನು 6-2, 6-4 ಸೆಟ್ಗಳಿಂದ ಮಣಿಸಿದರು.
ಸೋಮ್ದೇವ್, ಸಾಕೇತ್ರಲ್ಲದೆ ಎನ್.ಶ್ರೀರಾಮ್ಬಾಲಾಜಿ ಎರಡನೆ ಸುತ್ತಿಗೇರಿದ್ದಾರೆ.ಬಾಲಾಜಿ 7ನೆ ಶ್ರೇಯಾಂಕದ ಹ್ಯಾನ್ಸ್ ಕಾಸ್ಟಿಲ್ಲೊರನ್ನು 6-2, 6-4 ಸೆಟ್ಗಳಿಂದ ಮಣಿಸಿದರು.
ಜೀವನ್ ಹಾಗೂ ಪ್ರಜ್ನೇಶ್ ಮೊದಲ ಸುತ್ತಿನಲ್ಲೇ ಮುಗ್ಗರಿಸುವ ಮೂಲಕ ಟೂರ್ನಿಯಿಂದ ಹೊರ ನಡೆದಿದ್ದಾರೆ. ಜೀವನ್ ಬ್ರಿಟನ್ ಜೇಮ್ಸ್ ವಾರ್ಡ್ ವಿರುದ್ಧ 4-6, 3-6 ಸೆಟ್ಗಳಿಂದಲೂ, ಪ್ರಜ್ನೇಶ್ 8ನೆ ಶ್ರೇಯಾಂಕದ ಜೊಝೆಫ್ ಕೊವಲಿಕ್ ವಿರುದ್ಧ 3-6, 0-6 ಸೆಟ್ಗಳಿಂದ ಶರಣಾದರು.