ಪುಣೆ ಟೆಸ್ಟ್: ಆಸ್ಟ್ರೇಲಿಯ ಉತ್ತಮ ಆರಂಭ
ಪುಣೆ, ಫೆ.23: ವಿಶ್ವದ ಎರಡು ಅಗ್ರಮಾನ್ಯ ಟೆಸ್ಟ್ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಮೊದಲ ಟೆಸ್ಟ್ ಪಂದ್ಯ ಗುರುವಾರ ಇಲ್ಲಿ ಆರಂಭವಾಗಿದೆ.
ಬಾರ್ಡರ್-ಗವಾಸ್ಕರ್ ಟೋಫಿಗಾಗಿ ಉಭಯ ತಂಡಗಳ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಭೋಜನ ವಿರಾಮದ ವೇಳೆಗೆ 33 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತ್ತು. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ರೆನ್ಶಾ ಮೊದಲ ವಿಕೆಟ್ಗೆ 82 ರನ್ ಗಳಿಸಿ ಉತ್ತಮ ಆರಂಭ ನೀಡಿದ್ದರು.
77 ಎಸೆತಗಳಲ್ಲಿ 6 ಬೌಂಡರಿಗಳನ್ನು ಒಳಗೊಂಡ 38 ರನ್ ಗಳಿಸಿದ್ದ ಡೇವಿಡ್ ವಾರ್ನರ್ರನ್ನು ಕ್ಲೀನ್ ಬೌಲ್ಡ್ ಮಾಡಿದ ಉಮೇಶ್ ಯಾದವ್ ಭಾರತಕ್ಕೆ ಆರಂಭಿಕ ಮೇಲುಗೈ ಒದಗಿಸಿಕೊಟ್ಟರು. 36 ರನ್ ಗಳಿಸಿದ್ದ ರೆನ್ಶಾ ಗಾಯಾಳು ನಿವೃತ್ತಿಯಾದರು.
Next Story