ವನಿತೆಯರ ವಿಶ್ವ ಚೆಸ್ ಚಾಂಪಿಯನ್ಶಿಪ್: ಹರಿಕಾ ಸೆಮಿಫೈನಲ್ಗೆ
ಟೆಹ್ರಾನ್, ಫೆ.23: ಟೈ-ಬ್ರೇಕ್ನಲ್ಲಿ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಗ್ರಾಂಡ್ಮಾಸ್ಟರ್ ಹರಿಕಾ ದ್ರೋಣವಲ್ಲಿ ಮಹಿಳೆಯರ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದಾರೆ.
ಜಾರ್ಜಿಯದ ನಾನಾ ಝಗ್ನಿಝ್ರನ್ನು 1-1, 0.5-1.5 ಅಂತರದಿಂದ ಮಣಿಸಿ ಸತತ ಮೂರನೆ ಬಾರಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟರು.
ರ್ಯಾಪಿಡ್ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹರಿಕಾ ಅತ್ಯುತ್ತಮ ತಂತ್ರದ ಮೂಲಕ ಮೊದಲ ಪಂದ್ಯವನ್ನು ಗೆದ್ದುಕೊಂಡರು. ಎರಡನೆ ಗೇಮ್ನ್ನು ಗೆದ್ದುಕೊಳ್ಳುವುದರೊಂದಿಗೆ ಸೆಮಿ ಫೈನಲ್ಗೆ ತೇರ್ಗಡೆಯಾಗಿದ್ದು, ಅಂತಿಮ 4ರ ಸುತ್ತಿನಲ್ಲಿ ಚೀನಾದ ತಾನ್ ಝಾಂಗ್ಯಿ ಅವರನ್ನು ಎದುರಿಸಲಿದ್ದಾರೆ.
Next Story