ಮಹಿಳೆಯರ ಗಾಲ್ಫ್ ಪ್ರಶಸ್ತಿ ಜಯಿಸಿದ ವಾಣಿ ಕಪೂರ್
ಕೋಲ್ಕತಾ, ಫೆ.23: ಹೀರೊ ಮಹಿಳೆಯರ ವೃತ್ತಿಪರ ಗಾಲ್ಫ್ ಟೂರ್ನಿಯಲ್ಲಿ ವಾಣಿ ಕಪೂರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇಲ್ಲಿನ ಟಾಲಿಗಂಜ್ ಕ್ಲಬ್ನಲ್ಲಿ ಗುರುವಾರ ನಡೆದ ಫೈನಲ್ನಲ್ಲಿ ವಾಣಿ ಅವರು ನಾಲ್ಕು ಸ್ಟ್ರೋಕ್ಗಳ ಅಂತರದಿಂದ ಈ ಋತುವಿನಲ್ಲಿ ಮೊದಲ ಪ್ರಶಸ್ತಿ ಜಯಿಸಿದರು. ಒಟ್ಟು 217 ಅಂಕ ಗಳಿಸಿದ ಅಮನ್ದೀಪ್ ದ್ರಾಲ್ ದ್ವಿತೀಯ ಸ್ಥಾನ ಗಳಿಸಿದರು.
ಅನಿಶ್ಚಿತ ಆರಂಭವನ್ನು ಪಡೆದಿದ್ದ ದಿಲ್ಲಿಯ ವಾಣಿ ಕಪೂರ್ ಮೊದಲ ಹೋಲ್ನಲ್ಲಿ ಶಾಟ್ನ್ನು ಕಳೆದುಕೊಂಡರು. 10ನೆ ಹಾಗೂ 16ನೆ ಹೋಲ್ಗಳಲ್ಲಿ ನಿಯಂತ್ರಿತ ಪ್ರದರ್ಶನ ನೀಡಿದರು.
ಪಂಚಕುಲದ ಅಮನ್ದೀಪ್ ಆರಂಭ ಕೂಡ ಕಳಪೆಯಾಗಿತ್ತು. ಸಾನಿಯಾ ಶರ್ಮ ಹಾಗೂ ಶರ್ಮಿಳಾ ತಲಾ 218 ಅಂಕ ಗಳಿಸಿ ಮೂರನೆ ಸ್ಥಾನ ಹಂಚಿಕೊಂಡರು.
Next Story