ಒಲಿಂಪಿಕ್ಸ್ ಚಾಂಪಿಯನ್ ರೊಲಿನ್ಸ್ಗೆ ನಿಷೇಧ
ಲಂಡನ್, ಎ.21: ಒಲಿಂಪಿಕ್ಸ್ನಲ್ಲಿ 100 ಮೀ. ಹರ್ಡಲ್ಸ್ನಲ್ಲಿ ಚಾಂಪಿಯನ್ ಆಗಿರುವ ಬ್ರಿಯನ್ನಾ ರೊಲಿನ್ಸ್ಗೆ ಒಂದು ವರ್ಷ ನಿಷೇಧ ಹೇರಲಾಗಿದೆ ಎಂದು ಅಮೆರಿಕದ ಉದ್ದೀಪನಾ ತಡೆ ಘಟಕ ಗುರುವಾರ ತಿಳಿಸಿದೆ.
ಕಳೆದ ವರ್ಷ ರಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಅಮೆರಿಕ ಕ್ಲೀನ್ಸ್ವೀಪ್ ಸಾಧಿಸಲು ನೇತೃತ್ವವಹಿಸಿದ್ದ ರೊಲಿನ್ಸ್ 2016ರಲ್ಲಿ ಮೂರು ಡೋಪಿಂಗ್ ಟೆಸ್ಟ್ಗೆ ಗೈರುಹಾಜರಾಗಿದ್ದರು. ಈ ಮೂಲಕ ಉದ್ದೀಪನಾ ತಡೆ ಘಟಕದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಅಮೆರಿಕದ ಉದ್ದೀಪನಾ ತಡೆ ಘಟಕ ತಿಳಿಸಿದೆ.
25ರ ಹರೆಯದ ಅಮೆರಿಕ ಅಥ್ಲೀಟ್ 2016ರಲ್ಲಿ 8 ಬಾರಿ ಸ್ಪರ್ಧೆಯಿಲ್ಲದ ಸಮಯದಲ್ಲಿ ಡೋಪಿಂಗ್ ಪರೀಕ್ಷೆಗೆ ಗುರಿಯಾಗಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಕಳೆದ ವರ್ಷ ಸ್ಪರ್ಧೆಯ ವೇಳೆ ನಡೆಸಿದ್ದ ಎಲ್ಲ ಡೋಪಿಂಗ್ ಪರೀಕ್ಷೆಗಳಲ್ಲೂ ಪಾಸಾಗಿದ್ದರು.
Next Story