ಹಿರಿಯ ಸೈಕಲಿಸ್ಟ್ ಮೈಕಲ್ ಸ್ಕಾರ್ಪೊನಿ ರಸ್ತೆ ಅಪಘಾತಕ್ಕೆ ಬಲಿ
ಪ್ಯಾರಿಸ್, ಎ.21: ಹಿರಿಯ ಸೈಕಲಿಸ್ಟ್ ಮೈಕಲ್ ಸ್ಕಾರ್ಪೊನಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. 2011ರ ಜಿರೊ ಡಿ’ಇಟಾಲಿಯಾ ಚಾಂಪಿಯನ್ ಸ್ಕಾರ್ಪೊನಿ ಶನಿವಾರ ಬೆಳಗ್ಗೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ವ್ಯಾನ್ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಸ್ಕಾರ್ಪೊನಿ ಮನೆ ಸಮೀಪವೇ ಈ ಘಟನೆ ನಡೆದಿದೆ.
ಇದೊಂದು ಮಹಾ ದುರಂತ. ಸದಾ ಕಾಲ ಹಸನ್ಮುಖಿಯಾಗಿರುತ್ತಿದ್ದ ಶ್ರೇಷ್ಠ ಚಾಂಪಿಯನ್ ಹಾಗೂ ವಿಶೇಷ ಆಟಗಾರನೊಬ್ಬನನ್ನು ನಾವು ಕಳೆದುಕೊಂಡಿದ್ದೇವೆ. ಅಸ್ಟಾನಾ ಪ್ರೊ ಟೀಮ್ನಲ್ಲಿ ಅವರು ಪ್ರಮುಖ ಆಟಗಾರನಾಗಿದ್ದರು ಎಂದು ಅಸ್ಟಾನಾ ತಂಡ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಶುಕ್ರವಾರ ಸೈಕ್ಲಿಂಗ್ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ನಾಲ್ಕನೆ ಸ್ಥಾನ ಪಡೆದಿದ್ದ ಸ್ಕಾರ್ಪೊನಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Next Story