ಮರಿನ್ ಸಿಲಿಕ್ಗೆ ಇಸ್ತಾಂಬುಲ್ ಪ್ರಶಸ್ತಿ
ಇಸ್ತಾಂಬುಲ್, ಮೇ 8: ಕೆನಡಾದ ಅಗ್ರ ಶ್ರೇಯಾಂಕದ ಮಿಲೊಸ್ ರಾವೊನಿಕ್ರನ್ನು 7-6(3), 6-3 ಸೆಟ್ಗಳಿಂದ ಮಣಿಸಿದ ಕ್ರೊಯೇಷಿಯದ ಮರಿನ್ ಸಿಲಿಕ್ ಇಸ್ತಾಂಬುಲ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದಾರೆ.
ಐದು ವರ್ಷಗಳ ಬಳಿಕ ಮೊದಲ ಬಾರಿ ಕ್ಲೇ ಕೋರ್ಟ್ನಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಸಿಲಿಕ್ ಮುಂದಿನ ತಿಂಗಳು ನಡೆಯಲಿರುವ ಪ್ರತಿಷ್ಠಿತ ಫ್ರೆಂಚ್ ಓಪನ್ಗೆ ಭರ್ಜರಿ ತಯಾರಿ ನಡೆಸಿದ್ದಾರೆ. 28ರ ಹರೆಯದ ಸಿಲಿಕ್ ಎರಡನೆ ಬಾರಿ ಕ್ಲೇಕೋರ್ಟ್ ಪ್ರಶಸ್ತಿಯನ್ನು ಜಯಿಸಿದ್ದು, ಒಟ್ಟಾರೆ 17ನೆ ಪ್ರಶಸ್ತಿ ಇದಾಗಿದೆ.
‘‘ನಾನು ಕಳೆದ ಮೂರ್ನಾಲ್ಕು ವಾರಗಳಿಂದ ಆವೆಮಣ್ಣಿನ ಅಂಗಣದಲ್ಲಿ ಆಡುತ್ತಿದ್ದು, ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನ ಪಟ್ಟಿದ್ದೆ. ಈ ವಾರ ನನಗೆ ಅತ್ಯಂತ ಮಹತ್ವದ್ದೆನಿಸಿದೆ. ಮುಂಬರುವ ಎರಡು ಮಾಸ್ಟರ್ಸ್ 1000 ಟೂರ್ನಿಗಳು ಹಾಗೂ ಫ್ರೆಂಚ್ ಓಪನ್ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗುವ ವಿಶ್ವಾಸವಿದೆ’’ ಎಂದು ಸಿಲಿಕ್ ನುಡಿದರು.
Next Story