ಭಾರತ ಫುಟ್ಬಾಲ್ ತಂಡದ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ನಲ್ಲಿ ನೇರ ಪ್ರಸಾರ
ಹೊಸದಿಲ್ಲಿ, ಮೇ 23: ಭಾರತ ಫುಟ್ಬಾಲ್ ತಂಡದ ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ಹಾಗೂ ಅದರ ಡಿಜಿಟಲ್ ವೇದಿಕೆ ಹಾಟ್ಸ್ಟಾರ್ನಲ್ಲಿ ನೇರ ಪ್ರಸಾರವಾಗಲಿದೆ.
ಹಲವು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳು ಹಾಗೂ ಲೀಗ್ಗಳನ್ನು ಯಶಸ್ವಿಯಾಗಿ ನೇರ ಪ್ರಸಾರ ಮಾಡಿರುವ ಸ್ಟಾರ್ ನೆಟ್ವರ್ಕ್ ರಾಷ್ಟ್ರೀಯ ತಂಡ ಆಡುವ ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಮೂಲಕ ಕ್ರೀಡಾಭಿಮಾನಿಗಳ ಮನ ಗೆಲ್ಲಲು ಮುಂದಾಗಿದೆ.
‘‘ಇದು ನಾವು ಇಡುತ್ತಿರುವ ದೊಡ್ಡ ಹೆಜ್ಜೆಯಾಗಿದೆ. ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳ ನೇರಪ್ರಸಾರ ಮಾಡಲು ನಮಗೆ ಸಂತೋಷವಾಗುತ್ತಿದೆ’’ ಎಂದು ಸ್ಟಾರ್ ಸ್ಪೋರ್ಟ್ಸ್ ವಕ್ತಾರರು ತಿಳಿಸಿದ್ದಾರೆ.
Next Story