ಕೊನೆಯ ಕ್ಷಣದಲ್ಲಿ ಗೋಲು ಐಸ್ಲ್ಯಾಂಡ್ಗೆ ಮತ್ತೊಂದು ಸ್ಮರಣೀಯ ಗೆಲುವು
ರೆಕ್ಜಾವಿಕ್, ಜೂ.12: ಅಂತಿಮ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಕ್ರೊಯೇಷಿಯವನ್ನು ಮಣಿಸಿದ ಐಸ್ಲ್ಯಾಂಡ್ ಮತ್ತೊಂದು ಸ್ಮರಣೀಯ ಗೆಲುವು ಸಾಧಿಸಿದೆ.
ಐಸ್ಲ್ಯಾಂಡ್ನ ಹಾರ್ಡರ್ ಮ್ಯಾಗ್ನುಸನ್ 90ನೆ ನಿಮಿಷದಲ್ಲಿ ಗೋಲು ಬಾರಿಸಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಐಸ್ಲ್ಯಾಂಡ್ ಹಾಗೂ ಗ್ರೂಪ್-1ರಲ್ಲಿ ಆರು ಪಂದ್ಯಗಳಲ್ಲಿ ತಲಾ 13 ಅಂಕ ಗಳಿಸಿವೆೆ. ಕ್ರೊಯೇಷಿಯ ಗೋಲು ವ್ಯತ್ಯಾಸದಲ್ಲಿ ಮುಂದಿದೆ. ಉಭಯ ತಂಡಗಳು ಟರ್ಕಿ ಹಾಗೂ ಉಕ್ರೇನ್ಗಿಂತ 2 ಅಂಕ ಮುಂದಿದೆ.
ಗ್ರೂಪ್ ವಿಜೇತ ತಂಡ ಮುಂದಿನ ವರ್ಷ ರಶ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ಗೆ ನೇರ ಪ್ರವೇಶ ಪಡೆಯಲಿದೆ.
Next Story