ವಿಂಬಲ್ಡನ್: ವೋಝ್ನಿಯಾಕಿ ದ್ವಿತೀಯ ಸುತ್ತಿಗೆ ಲಗ್ಗೆ
ಲಂಡನ್, ಜು.5: ಡೆನ್ಮಾರ್ಕ್ನ ಕರೊಲಿನ್ ವೋಝ್ನಿಯಾಕಿ ವಿಂಬಲ್ಡನ್ ಟೂರ್ನಿಯಲ್ಲಿ ಎರಡನೆ ಸುತ್ತಿಗೆ ತಲುಪಿದ್ದಾರೆ.
ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ವೋಝ್ನಿಯಾಕಿ ಹಂಗೇರಿಯದ ಟಿಮಿಯಾ ಬಾಬೊಸ್ರನ್ನು 6-4, 4-6, 6-1 ಸೆಟ್ಗಳಿಂದ ಮಣಿಸಿದರು. ಐದನೆ ಶ್ರೇಯಾಂಕದ ಆಟಗಾರ್ತಿ ವೋಝ್ನಿಯಾಕಿ ಮುಂದಿನ ಸುತ್ತಿನಲ್ಲಿ ಬಲ್ಗೇರಿಯದ ಸ್ವೆಟಾನಾ ಪಿರೊಂಕೊವಾ ಅಥವಾ ಇಟಲಿಯ ಸಾರಾ ಇರ್ರಾನಿ ಅವರನ್ನು ಎದುರಿಸಲಿದ್ದಾರೆ.
Next Story