ಬೋಪಣ್ಣ ಜೋಡಿ ಕ್ವಾ.ಫೈನಲ್ಗೆ ಲಗ್ಗೆ
ಲಂಡನ್, ಜು.13: ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಸಾನಿಯಾ ಮಿರ್ಝಾ ಮಿಶ್ರ ಡಬಲ್ಸ್ ಸ್ಪರ್ಧೆಯಿಂದ ಹೊರ ನಡೆದರೆ, ರೋಹನ್ ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ.
53 ನಿಮಿಷಗಳ ಕಾಲ ನಡೆದ ಮಿಶ್ರ ಡಬಲ್ಸ್ನ ಮೂರನೆ ಸುತ್ತಿನ ಪಂದ್ಯದಲ್ಲಿ ನಾಲ್ಕನೆ ಶ್ರೇಯಾಂಕದ ಸಾನಿಯಾ ಹಾಗೂ ಅವರ ಕ್ರೊಯೇಷಿಯದ ಜೊತೆಗಾರ ಇವಾನ್ ಡೊಡಿಗ್ ಅವರು ಹಾಲಿ ಚಾಂಪಿಯನ್ ಫಿನ್ಲ್ಯಾಂಡ್ನ ಹೆನ್ರಿ ಕಾಂಟಿನೆನ್ ಹಾಗೂ ಬ್ರಿಟನ್ನ ಹೀದರ್ ವ್ಯಾಟ್ಸನ್ ವಿರುದ್ಧ 6-7, 4-6 ಸೆಟ್ಗಳ ಅಂತರದಿಂದ ಸೋತಿದ್ದಾರೆ.
ಮತ್ತೊಂದು ಮಿಶ್ರ ಡಬಲ್ಸ್ ಪಂದ್ಯದಲ್ಲಿ ಕನ್ನಡಿಗ ಬೋಪಣ್ಣ ಅವರು ಕೆನಡಾದ ಜೊತೆಗಾರ್ತಿ ಗಾಬ್ರಿಯೆಲಾ ಡಾಬ್ರೊಸ್ಕಿಯೊಂದಿಗೆ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
10ನೆ ಶ್ರೇಯಾಂಕದ ಬೋಪಣ್ಣ-ಡಾಬ್ರೊಸ್ಕಿ ಜೋಡಿ ಮೂರನೆ ಸುತ್ತಿನ ಪಂದ್ಯದಲ್ಲಿ ಕ್ರೊಯೇಷಿಯ ಜೋಡಿ ನಿಕೊಲಾ ಮೆಕ್ಟಿಕ್ ಹಾಗೂ ಅನಾ ಕಾಂಜು ಅವರನ್ನು 7-6, 6-2 ಸೆಟ್ಗಳ ಅಂತರದಿಂದ ಮಣಿಸಿದೆ.
ಬೋಪಣ್ಣ ಹಾಗೂ ಡಾಬ್ರೊಸ್ಕಿ ಮುಂದಿನ ಸುತ್ತಿನಲ್ಲಿ ಕಾಂಟಿನೆನ್ ಹಾಗೂ ವ್ಯಾಟ್ಸನ್ರನ್ನು ಎದುರಿಸಲಿದ್ದಾರೆ.