ಯುಎಸ್ ಓಪನ್ ಬಹುಮಾನ ಮೊತ್ತ ಹೆಚ್ಚಳ
ನ್ಯೂಯಾರ್ಕ್, ಜು.19: ಈ ವರ್ಷ ನಡೆಯಲಿರುವ ಅಮೆರಿಕನ್ ಓಪನ್ 50.4 ಮಿಲಿಯನ್ ಡಾಲರ್ ಬಹುಮಾನ ಮೊತ್ತವಿರುವ ಮೊದಲ ಟೆನಿಸ್ ಟೂರ್ನಿಯಾಗಲಿದೆ. ಒಟ್ಟು ಬಹುಮಾನ ಮೊತ್ತದಲ್ಲಿ 9 ಶೇ. ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಅಮೆರಿಕ ಟೆನಿಸ್ ಸಂಸ್ಥೆ ತಿಳಿಸಿದೆ.
ಒಟ್ಟು 50.4 ಮಿಲಿಯನ್ ಡಾಲರ್ ಬಹುಮಾನ ಮೊತ್ತದಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ವಿಜೇತರು ತಲಾ 3.7 ಮಿಲಿಯನ್ ಡಾಲರ್ ಗೆಲ್ಲಲಿದ್ದಾರೆ. ರನ್ನರ್ ಅಪ್ 1.825 ಮಿಲಿಯನ್ ಡಾಲರ್ ಬಹುಮಾನ ತನ್ನದಾಗಿಸಿಕೊಳ್ಳುತ್ತಾರೆ.
ಪುರುಷರ ಹಾಗೂ ಮಹಿಳೆಯರ ಡಬಲ್ಸ್ ಚಾಂಪಿಯನ್ಗಳು ತಲಾ 675,000 ಡಾಲರ್ ಪಡೆಯಲಿದ್ದಾರೆ. ಇದು ಯುಎಸ್ ಓಪನ್ ಇತಿಹಾಸದಲ್ಲಿ ಗರಿಷ್ಠ ಬಹುಮಾನ ಮೊತ್ತವಾಗಿದೆ. ಯುಎಸ್ ಓಪನ್ ಆ.28 ರಿಂದ ಸೆ.10ರ ತನಕ ನಡೆಯಲಿದೆ.
Next Story