ರಶ್ಯನ್ ಓಪನ್: ಆನಂದ್ ಪವಾರ್ ರಾಹುಲ್ ಕ್ವಾರ್ಟರ್ ಫೈನಲ್ ಗೆ
ವ್ಲಾಡಿವೊಸ್ಟೊಕ್, ಜು.20: ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಆನಂದ್ ಪವಾರ್, ರಶಿಕಾ ರಾಜೆ, ಋಶಾಲಿ ಹಾಗೂ ರಾಹುಲ್ ಯಾದವ್ ರಶ್ಯನ್ ಓಪನ್ ಜಿಪಿ ಟೂರ್ನಿಯ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
8ನೆ ಶ್ರೆಯಾಂಕದ ಆನಂದ್ ಮಲೇಷ್ಯಾದ ಲಿಮ್ ಚಿ ವಿಂಗ್ರನ್ನು 10-12, 11-6, 11-7, 12-10 ಅಂಕಗಳ ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ವ್ಲಾಡಿಮಿರ್ ಮಲ್ಕೊವ್ರನ್ನು ಎದುರಿಸಲಿದ್ದಾರೆ. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ರಾಹುಲ್ ಸಹ ಆಟಗಾರ ಶುಭಾಂಕರ್ ಡೇ ಅವರನ್ನು 11-13, 11-4, 11-6, 11-7 ಅಂತರದಿಂದ ಸೋಲಿಸಿದ್ದಾರೆ. ರಾಹುಲ್ ಕ್ವಾರ್ಟರ್ ಫೈನಲ್ನಲ್ಲಿ ಇಂಗ್ಲೆಂಡ್ನ ಯೆಚಾಂಗ್ ವಾಂಗ್ರನ್ನು ಎದುರಿಸಲಿದ್ದಾರೆ. ಮಹಿಳೆಯರ ಸಿಂಗಲ್ಸ್ನಲ್ಲಿ ರುಶಾಲಿ ಸ್ಥಳೀಯ ಶಟ್ಲರ್ ಅನಾಸ್ಟಾಸಿಯಾ ಶರಪೋವಾರನ್ನು 11-8, 15-14, 11-6 ಅಂತರದಿಂದ ಮಣಿಸಿದ್ದು, ಮುಂದಿನ ಸುತ್ತಿನಲ್ಲಿ ರಶ್ಯದ ಇನ್ನೋರ್ವ ಆಟಗಾರ್ತಿ ನಟಾಲಿಯ ಪೆರ್ಮಿನೊವಾರನ್ನು ಎದುರಿಸಲಿದ್ದಾರೆ. ಆರನೆ ಶ್ರೇಯಾಂಕದ ರಸಿಕಾ ಜಪಾನ್ನ ಮಿಯಾಮಿ ಕವಾಶಿಮಾರನ್ನು 13-11, 11-7, 15-14 ಅಂತರದಿಂದ ಸೋಲಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ಇನ್ನೋರ್ವ ಆಟಗಾರ್ತಿ ನಟ್ಸುಕಿ ನಿಡೈರಾರನ್ನು ಎದುರಿಸಲಿದ್ದಾರೆ.