ಮೊದಲ ಟೆಸ್ಟ್ : ಶ್ರೀಲಂಕಾ 154/5
ಉಪುಲ್ ತರಂಗ (64)
ಗಾಲೆ, ಜು.27: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ನಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಮೊದಲ ಇನಿಂಗ್ಸ್ನಲ್ಲಿ ಎರಡನೆ ದಿನದಾಟದಂತ್ಯಕ್ಕೆ 44 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಿದೆ.
54 ರನ್ ಗಳಿಸಿರುವ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು 6 ರನ್ ಗಳಿಸಿರುವ ದಿಲ್ವಾನ್ ಪೆರೆರಾ ಔಟಾಗದೆ ಕ್ರೀಸ್ನಲ್ಲಿದ್ದಾರೆ. ಶ್ರೀಲಂಕಾ ಫಾಲೋ ಆನ್ ತಪ್ಪಿಸಲು ಇನ್ನೂ 247 ರನ್ ಗಳಿಸಬೆಕಾಗಿದೆ. ಭಾರತದ ವೇಗದ ಬೌಲರ್ಗಳಾದ ಮುಹಮ್ಮದ್ ಶಮಿ (30ಕ್ಕೆ 2), ಉಮೇಶ್ ಯಾದವ್ (50ಕ್ಕೆ 1) ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನಿ(48ಕ್ಕೆ 1) ದಾಳಿಗೆ ಸಿಲುಕಿ ಅಗ್ರಸರದಿಯ ದಾಂಡಿಗರನ್ನು ಬೇಗನೆ ಕಳೆದುಕೊಂಡಿದೆ.
ಉಪುಲ್ ತರಂಗ (64) ಮತ್ತು ಆ್ಯಂಜೆಲೊ ಮ್ಯಾಥ್ಯೂಸ್ ಅರ್ಧಶತಕ ದಾಖಲಿಸಿ ತಂಡದ ಸ್ಕೋರ್ನ್ನು 150 ಗಡಿ ದಾಟಿಸಿದ್ದಾರೆ. ದಿಮುತ್ ಕರುಣ್ರತ್ನೆ (2), ಧನುಷ್ಕ ಗುಣತಿಲಕ (18), ಕುಶಲ್ ಮೆಂಡಿಸ್(0), ನಿರೋಶನ್ ದಿಕ್ವೆಲ್ಲಾ (8) ಔಟಾಗಿದ್ದಾರೆ.
ಇದಕ್ಕೂ ಮೊದಲು ಭಾರತ ಮೊದಲ ಇನಿಂಗ್ಸ್ನಲ್ಲಿ 133.1 ಓವರ್ಗಳಲ್ಲಿ 600 ರನ್ಗಳಿಗೆ ಆಲೌಟಾಗಿತ್ತು.