ಎಟಿಪಿ ಸಿಟಿ ಓಪನ್: ಮಾನ್ಫಿಲ್ಸ್ಗೆ ಭಾಂಬ್ರಿ ಶಾಕ್
ವಾಷಿಂಗ್ಟನ್, ಆ.3: ಜೀವನಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಯೂಕಿ ಭಾಂಬ್ರಿ ವಿಶ್ವದ ನಂ.22ನೆ ಆಟಗಾರ ಹಾಗೂ ಹಾಲಿ ಚಾಂಪಿಯನ್ ಗೇಲ್ ಮಾನ್ಫಿಲ್ಸ್ ರನ್ನು ಮಣಿಸುವ ಮೂಲಕ ಎಟಿಪಿ ಸಿಟಿ ಓಪನ್ನಲ್ಲಿ ಮೂರನೆ ಸುತ್ತಿಗೆ ಪ್ರವೇಶಿಸಿದ್ದಾರೆ.
ಎಟಿಪಿ 500 ಟೂರ್ನಮೆಂಟ್ನ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದ ಭಾಂಬ್ರಿ ಒಂದು ಗಂಟೆ ಹಾಗೂ 51 ನಿಮಿಷಗಳ ಕಾಲ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ನ ಆರನೆ ಶ್ರೇಯಾಂಕದ ಆಟಗಾರ ಮಾನ್ಫಿಲ್ಸ್ರನ್ನು 6-3, 4-6, 7-5 ಸೆಟ್ಗಳಿಂದ ಸೋಲಿಸುವುದರೊಂದಿಗೆ ಅಂತಿಮ-16ರ ಸುತ್ತು ತಲುಪಿದ್ದಾರೆ. ಭಾಂಬ್ರಿ ಮುಂದಿನ ಸುತ್ತಿನಲ್ಲಿ ಅರ್ಜೆಂಟೀನದ ಗುಡೊ ಪೆಲ್ಲಾರನ್ನು ಎದುರಿಸಲಿದ್ದಾರೆ. ಪೆಲ್ಲಾ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಇನ್ನೋರ್ವ ಆಟಗಾರ ರಾಮ್ಕುಮಾರ್ ರಾಮನಾಥನ್ರನ್ನು ಮಣಿಸಿ ಎರಡನೆ ಸುತ್ತಿಗೆ ತಲುಪಿದ್ದರು. 2ನೆ ಸುತ್ತಿನಲ್ಲಿ ಜರ್ಮನಿಯ ಮಿಸ್ಚಾ ಝ್ವೆರೆವ್ರನ್ನು 6-7(5), 7-6(2), 6-3 ಸೆಟ್ಗಳಿಂದ ಮಣಿಸಿದ್ದಾರೆ.
Next Story