ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ಲ !
ಪಟ್ಟಿಯಲ್ಲಿರುವ ಮೊದಲ ಮೂವರು ಯಾರು ಗೊತ್ತೇ ?
ಹೊಸದಿಲ್ಲಿ, ಆ.4: ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರ ಎಂದಾಕ್ಷಣ ಕ್ರಿಸ್ಟಿಯಾನೋ ರೊನಾಲ್ಡೋ ನೆನಪಾಗುತ್ತಾರೆ. ರಿಯಲ್ ಮ್ಯಾಡ್ರಿಡ್ ನ ಸ್ಟಾರ್ ಆಟಗಾರರಾಗಿರುವ ರೊನಾಲ್ಡೋ ವಿಶ್ವದ ಅತ್ಯಂತ ದುಬಾರಿ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದವರು, ಆದರೆ ಇದೀಗ ಈ ಪಟ್ಟವನ್ನು ಬ್ರೆಝಿಲ್ ನ ಸ್ಟಾರ್ ಪ್ಲೇಯರ್, 105 ಗೋಲುಗಳನ್ನು ದಾಖಲಿಸಿರುವ ನೇಮರ್ ತನ್ನದಾಗಿಸಿಕೊಂಡಿದ್ದಾರೆ.
(ನೇಮರ್)
ಬಾರ್ಸಿಲೋನಾದಿಂದ ಪ್ಯಾರಿಸ್ ನ ಸೇಂಟ್ ಜರ್ಮೈನ್ 5 ವರ್ಷಗಳ ಅವಧಿಗೆ 1,680 ಕೋಟಿ ರೂ.ಗಳಿಗೆ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ನೇಮರ್ ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರನಾಗಿದ್ದಾರೆ.
ಬಾರ್ಸಿಲೋನಾ ಪರ ತಾನಾಡಿದ 186 ಪಂದ್ಯಗಳಲ್ಲಿ ನೇಮರ್ 105 ಗೋಲುಗಳನ್ನು ದಾಖಲಿಸಿದ್ದಾರೆ. ವಿಶ್ವದ ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ ಪೌಲ್ ಪೋಗ್ಬಾ, ಗ್ಯಾರೆತ್ ಬೇಲ್ ನಂತರದ ಸ್ಥಾನಗಳಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊರವರು ನಾಲ್ಕನೆ ಸ್ಥಾನದಲ್ಲಿದ್ದಾರೆ.
(ಪೌಲ್ ಪೋಗ್ಬಾ)
(ಗ್ಯಾರೆತ್ ಬೇಲ್)
(ಕ್ರಿಸ್ಟಿಯಾನೊ ರೊನಾಲ್ಡೊ)