ಶರವೇಗದ ಸರದಾರ ಬೋಲ್ಟ್ ಸೋಲಿನೊಂದಿಗೆ ವಿದಾಯ
ಲಂಡನ್, ಆ.13: ವಿಶ್ವದ ಶರ ವೇಗದ ಸರದಾರ ಜಮೈಕಾದ ಉಸೇನ್ ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಸೋಲಿನೊಂದಿಗೆ ವಿದಾಯ ಹೇಳಿದ್ದಾರೆ.
ಶನಿವಾರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 4 x 100 ಮೀ. ರಿಲೇನಲ್ಲಿ ಉಸೇನ್ ಬೋಲ್ಟ್ ಗಾಯಗೊಂಡ ಹಿನ್ನೆಲೆಯಲ್ಲಿ ಅವರ ಜಮೈಕಾ ತಂಡ ಸೋಲನುಭವಿಸಿತು. ಇದರೊಂದಿಗೆ ಕೊನೆಯ ಓಟದಲ್ಲಿ ಜಮೈಕಾ ತಂಡಕ್ಕೆ ಚಿನ್ನ ತಂದು ಕೊಡುವ ಬೋಲ್ಟ್ ಕನಸು ಈಡೆರಲಿಲ್ಲ.
4 x 100 ಮೀ. ರಿಲೇನಲ್ಲಿ ಗ್ರೇಟ್ ಬ್ರಿಟನ್ ಚಿನ್ನ, ಅಮೆರಿಕ ಬೆಳ್ಳಿ ಮತ್ತು ಜಪಾನ್ ಬೆಳ್ಳಿ ಗೆದ್ದುಕೊಂಡಿತು
ಕಳೆದ ವಾರ ಉಸೇನ್ ಬೋಲ್ಟ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಕಂಚು ಪಡೆದಿದ್ದರು.
Next Story