ಸಿನ್ಸಿನಾಟಿ ಓಪನ್: ರಫೆಲ್ ನಡಾಲ್,ಪ್ಲಿಸ್ಕೋವಾ ಜಯಭೇರಿ
ಮಾಸನ್, ಆ.17: ಸಿನ್ಸಿನಾಟಿ ಓಪನ್ನಲ್ಲಿ ನೇರ ಸೆಟ್ಗಳಿಂದ ಜಯ ಸಾಧಿಸಿರುವ ನಂ.1 ಶ್ರೇಯಾಂಕದ ರಫೆಲ್ ನಡಾಲ್ ಹಾಗೂ ಕರೊಲಿನಾ ಪ್ಲಿಸ್ಕೋವಎರಡನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಬುಧವಾರ ರಾತ್ರಿ ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್ನ ನಡಾಲ್ ಅವರು ರಿಚರ್ಡ್ ಗಾಸ್ಕಟ್ರನ್ನು 6-3, 6-4 ಸೆಟ್ಗಳಿಂದ ಮಣಿಸಿದರು.
ಮಹಿಳೆಯರ ಸಿಂಗಲ್ಸ್ನಲ್ಲಿ ಪ್ಲಿಸ್ಕೋವಾ ಅವರು ನಟಾಲಿಯ ವಿಕ್ಯಸೇವಾ ವಿರುದ್ಧ ಕೇವಲ 67 ನಿಮಿಷಗಳಲ್ಲಿ 6-2, 6-3 ನೇರ ಸೆಟ್ಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ವೀನಸ್ಗೆ ಆಘಾತ: ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಮಹಿಳೆಯರ ಸಿಂಗಲ್ಸ್ನ ಎರಡನೆ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಕ್ವಾಲಿಫೈಯರ್ ಅಶ್ಲೆ ಬಾರ್ಟಿ ವಿರುದ್ಧ 6-3, 2-6, 6-2 ಸೆಟ್ಗಳಿಂದ ಸೋತಿದ್ದಾರೆ.
48ನೆ ರ್ಯಾಂಕಿನ ಆಟಗಾರ್ತಿ ಬಾರ್ಟಿ ಇದೇ ಮೊದಲ ಬಾರಿ ಅಗ್ರ-10 ರ್ಯಾಂಕಿನ ಆಟಗಾರ್ತಿಯನ್ನು ಮಣಿಸಿದ್ದಾರೆ. ವೀನಸ್ ಈವರ್ಷ 37ನೆ ವಯಸ್ಸಿನಲ್ಲಿ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಓಪನ್ನಲ್ಲಿ ಫೈನಲ್ಗೆ ತಲುಪಿ ಗಮನ ಸೆಳೆದಿದ್ದರು.
ವಿಶ್ವದ ನಂ.3ನೆ ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ರಶ್ಯದ ಎಕಟೆರಿನಾ ಮಕರೋವಾ ವಿರುದ್ಧ 6-4, 1-6, 7-6(11) ಸೆಟ್ಗಳ ಅಂತರದಿಂದ ಸೋತಿದ್ದಾರೆ. ಮಕರೋವಾ ಈವರ್ಷದ ಫ್ರೆಂಚ್ ಓಪನ್ನಲ್ಲಿ ಕೆರ್ಬರ್ಗೆ ಸೋಲುಣಿಸಿದ್ದರು.