ವಿಂಡೀಸ್ ತಂಡಕ್ಕೆ ಕ್ರಿಸ್ ಗೇಲ್, ಸ್ಯಾಮುಯೆಲ್ಸ್ ವಾಪಸ್
ಜಮೈಕಾ, ಆ.21: ಕ್ರಿಸ್ ಗೇಲ್ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ದೀರ್ಘಸಮಯದ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ.
2015ರ ಮಾರ್ಚ್ನಲ್ಲಿ ಕೊನೆಯ ಬಾರಿ ಏಕದಿನ ಪಂದ್ಯವನ್ನಾಡಿದ್ದ ಗೇಲ್ ಹಾಗೂ 2016ರ ಅಕ್ಟೋಬರ್ನಲ್ಲಿ ಕೊನೆಯ ಬಾರಿ ವಿಂಡೀಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಸ್ಯಾಮುಯೆಲ್ಸ್ ಇದೀಗ ಜೇಸನ್ ಹೋಲ್ಡರ್ ನೇತೃತ್ವದ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ವಿರುದ್ಧ ನಡೆದಿದ್ದ ಏಕದಿನ ಸರಣಿಯಲ್ಲಿ ಆಡಿದ್ದ ಕೀರೊನ್ ಪೊವೆಲ್, ಜೋನಾಥನ್ ಕಾರ್ಟರ್ ಹಾಗೂ ರೋಸ್ಟನ್ ಚೇಸ್ ತಂಡದಿಂದ ಹೊರಗುಳಿದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಆ.25 ರಿಂದ ಆರಂಭವಾಗಲಿರುವ 2ನೆ ಟೆಸ್ಟ್ ಆಡಿದ ಬಳಿಕ ವಿಂಡೀಸ್ ತಂಡ ಐರ್ಲೆಂಡ್ ವಿರುದ್ದ ಏಕೈಕ ಏಕದಿನ ಹಾಗೂ ಇಂಗ್ಲೆಂಡ್ನ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
<ವೆಸ್ಟ್ಇಂಡೀಸ್ ಏಕದಿನ ತಂಡ: ಸುನೀಲ್ ಅಂಬ್ರಿಸ್, ದೇವೇಂದ್ರ ಬಿಶು, ಮಿಗುಯೆಲ್ ಕಮ್ಮಿನ್ಸ್, ಕ್ರಿಸ್ ಗೇಲ್, ಜೇಸನ್ ಹೋಲ್ಡರ್(ನಾಯಕ), ಕೈಲ್ ಹೋಪ್, ಶೈ ಹೋಪ್, ಅಲ್ಝಾರಿ ಜೋಸೆಫ್, ಎವಿನ್ ಲೂವಿಸ್, ಜೇಸನ್ ಮುಹಮ್ಮದ್, ಅಶ್ಲೆ ನರ್ಸ್, ರೊವ್ಮನ್ ಪೊವೆಲ್, ಮರ್ಲಾನ್ ಸ್ಯಾಮುಯೆಲ್ಸ್, ಜೆರೊಮ್ ಟೇಲರ್, ಕೆಸ್ರಿಕ್ ವಿಲಿಯಮ್ಸ್.