ದಕ್ಷಿಣ ಆಫ್ರಿಕ ಸರಣಿಗೆ ಬಾಂಗ್ಲಾ ತಂಡ ಪ್ರಕಟ
ಶಾಕಿಬ್ ಅಲ್ ಹಸನ್ಗೆ ವಿಶ್ರಾಂತಿ
ಢಾಕಾ, ಸೆ.11: ದಕ್ಷಿಣ ಆಫ್ರಿಕ ವಿರುದ್ಧ ಸೆ.28 ಆರಂಭವಾಗಲಿರುವ ಎರಡು ಟೆಸ್ಟ್ಗಳ ಪ್ರವಾಸ ಸರಣಿಗೆ ಬಾಂಗ್ಲಾದೇಶ ತಂಡ ಕ್ರಿಕೆಟ್ ತಂಡ ಸೋಮವಾರ ಪ್ರಕಟಗೊಂಡಿದ್ದು, ಬ್ಯಾಟ್ಸ್ಮನ್ ಮಹಮ್ಮುದುಲ್ಲಾ ಅವರನ್ನು 15 ಮಂದಿಯ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಆಲ್ರೌಂಡರ್ ಶಾಕಿಬ್ ಅಲ್ ಹಸನ್ ಟೆಸ್ಟ್ ಸರಣಿಯಿಂದ 6 ತಿಂಗಳು ದೂರ ಉಳಿಯಲು ಅವಕಾಶ ನೀಡುವಂತೆ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದಾರೆ.ಈ ಕಾರಣದಿಂದಾಗಿ ಅವರ ಮನವಿಯನ್ನು ಪುರಸ್ಕರಿಸಿರುವ ಆಯ್ಕೆ ಸಮಿತಿ ಅನುಭವಿ ಆಟಗಾರ ಮಹಮ್ಮುದುಲ್ಲಾರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಮಹಮ್ಮುದುಲ್ಲಾ ಕಳೆದ ಮಾರ್ಚ್ನಲ್ಲಿ ಲಂಕಾ ವಿರುದ್ಧ ಕೊನೆಯ ಬಾರಿ ಆಡಿದ್ದರು.
► ಬಾಂಗ್ಲಾದೇಶ ತಂಡ: ಮುಶ್ಫೀಕುರ್ರಹೀಂ (ನಾಯಕ), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಇಮ್ರುಲ್ ಕೈಸ್, ಶಬೀರ್ ರಹ್ಮಾನ್, ಮಹಮ್ಮುದುಲ್ಲಾ, ಲಿಟ್ಟನ್ ದಾಸ್, ಮೆಹೆೆದಿ ಹಸನ್, ತೈಜುಲ್ ಹಸನ್ ಇಸ್ಲಾಂ, ಮುಸ್ತಫಿಝುರ್ರಹ್ಮಾನ್, ರುಬೆಲ್ ಹುಸೈನ್, ಶಫಿಯುಲ್ ಇಸ್ಲಾಂ, ತಾಸ್ಕಿನ್ ಅಹ್ಮದ್, ಸುಭಾಷಿಸ್ ರಾಯ್, ಮೊಮಿನುಲ್ ಹಕ್.