ವಿಕ್ಟರ್ ಅಕ್ಸೆಲ್ಸನ್ ಗೆ ಜಪಾನ್ ಓಪನ್ ಪ್ರಶಸ್ತಿ
ಟೋಕಿಯೋ, ಸೆ.24: ವಿಶ್ವ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸನ್ ಮೊತ್ತ ಮೊದಲ ಬಾರಿ ಜಪಾನ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಡೆನ್ಮಾರ್ಕ್ ಆಟಗಾರ ಅಕ್ಸೆಲ್ಸನ್ ರವಿವಾರ ನಡೆದ ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ಮಲೇಷ್ಯಾದ ಲೀ ಚೊಂಗ್ ವೀ ಅವರನ್ನು 21-14, 19-21, 21-14 ಗೇಮ್ಗಳ ಅಂತರದಿಂದ ಸೋಲಿಸಿದರು.
ಅಕ್ಸೆಲ್ಸನ್ ಕಳೆದ ತಿಂಗಳು ಗ್ಲಾಸ್ಗೋದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲಿನ್ ಡಾನ್ರನ್ನು ಮಣಿಸುವ ಮೂಲಕ ಟ್ರೋಫಿ ಜಯಿಸಿದ್ದರು.
ಮರಿನ್ಗೆ ಸಿಂಗಲ್ಸ್ ಪ್ರಶಸ್ತಿ: ಸ್ಪೇನ್ನ ಕರೊಲಿನಾ ಮರಿನ್ ಜಪಾನ್ ಓಪನ್ನ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ರಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತೆ ಮರಿನ್ ಫೈನಲ್ ಪಂದ್ಯದಲ್ಲಿ ಚೀನಾದ ಹೀ ಬಿಂಗ್ಜಿಯಾವೊರನ್ನು 23-21, 21-12 ಗೇಮ್ಗಳ ಅಂತರದಿಂದ ಮಣಿಸಿದ್ದಾರೆ.
Next Story