ಭಾರತ ವಿರುದ್ಧ ಏಕದಿನ ಸರಣಿ: ಕಿವೀಸ್ ತಂಡ ಪ್ರಕಟ
ಹೊಸದಿಲ್ಲಿ, ಸೆ.25: ನ್ಯೂಝಿಲೆಂಡ್ ತಂಡ ಭಾರತ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ 9 ಸದಸ್ಯರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಉಳಿದ ಆರು ಆಟಗಾರರನ್ನು ಪ್ರಸ್ತುತ ಭಾರತ ಪ್ರವಾಸದಲ್ಲಿರುವ ನ್ಯೂಝಿಲೆಂಡ್ ‘ಎ’ ತಂಡದಿಂದ ಆಯ್ಕೆ ಮಾಡಲು ನಿರ್ಧರಿಸಿದೆ.
ಭಾರತ-ನ್ಯೂಝಿಲೆಂಡ್ ಏಕದಿನ ಸರಣಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅ.22 ರಂದು ಆರಂಭವಾಗಲಿದೆ. ಪುಣೆ ಹಾಗೂ ಕಾನ್ಪುರದಲ್ಲಿ ಉಳಿದೆರಡು ಪಂದ್ಯಗಳು ನಡೆಯುತ್ತವೆ. ಏಕದಿನ ಸರಣಿಯ ಬಳಿಕ ಟ್ವೆಂಟಿ-20 ಸರಣಿ ಆರಂಭವಾಗುತ್ತದೆ.
9 ಆಟಗಾರರ ಪೈಕಿ ಮಿಚೆಲ್ ಸ್ಯಾಂಟ್ನರ್ ಮಾತ್ರ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಭಾರತ ಮೂಲದ ಐಶ್ ಸೋಧಿ ನ್ಯೂಝಿಲೆಂಡ್ ಎ ತಂಡದಲ್ಲಿದ್ದು, ಸೋಧಿ ಏಕದಿನ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಆಲ್ರೌಂಡರ್ ಜಿಮ್ಮಿ ನಿಶಾಮ್ ಹಾಗೂ ಬ್ಯಾಟ್ಸ್ಮನ್ ನೀಲ್ ಬ್ರೂಮ್ರನ್ನು ತಂಡದಿಂದ ಕೈಬಿಡಲಾಗಿದೆ.
ನ್ಯೂಝಿಲೆಂಡ್ ತಂಡ: ಮಾರ್ಟಿನ್ ಗಪ್ಟಿಲ್, ಟಾಮ್ ಲಥಾಮ್(ವಿಕೆಟ್ಕೀಪರ್), ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್,ಕಾಲಿನ್ ಡಿ ಗ್ರಾಂಡ್ಹೊಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್.