ಸಾನಿಯಾ-ಬೋಪಣ್ಣ ಕ್ವಾರ್ಟರ್ಫೈನಲ್ಗೆ
ಬೀಜಿಂಗ್, ಅ.4: ಇಲ್ಲಿ ನಡೆಯುತ್ತಿರುವ ಚೀನಾ ಓಪನ್ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ. ಮಹಿಳೆಯರ ಡಬಲ್ಸ್ನ ಎರಡನೆ ಸುತ್ತಿನ ಪಂದ್ಯದಲ್ಲಿ ಸಾನಿಯಾ ಹಾಗೂ ಅವರ ಚೀನಾದ ಜೊತೆಗಾರ್ತಿ ಪೆಂಗ್ ಶುಐ ಬೆಲ್ಜಿಯಂ-ಡಚ್ ಜೋಡಿ ಎಲಿಸ್ ಮೆರ್ಟೆನ್ಸ್ ಹಾಗೂ ಡೆಮಿ ಸ್ಚರ್ಸ್ ವಿರುದ್ಧ 7-5, 6-2 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು. ಮೂರನೆ ಶ್ರೇಯಾಂಕದ ಸಾನಿಯಾ-ಪೆಂಗ್ ಜೋಡಿ ಮೊದಲ ಸುತ್ತಿನಲ್ಲಿ ಬೈ ಪಡೆದಿತ್ತು. ಪುರುಷರ ಡಬಲ್ಸ್ನಲ್ಲಿ ರೋಹನ್ ಹಾಗೂ ಉರುಗ್ವೆಯ ಪಾಬ್ಲೊ ಕ್ಯುವಾಸ್ ಜೋಡಿ ಚೀನಾದ ಮಾಯೊ-ಕ್ಸಿನ್ ಗಾಂಗ್ ಹಾಗೂ ಝಿ ಝಾಂಗ್ ವಿರುದ್ಧ 6-0, 6-4 ಅಂತರದಿಂದ ಜಯ ಸಾಧಿಸಿತು.
Next Story