ಡೆನ್ಮಾರ್ಕ್ ಓಪನ್: ಸಿಂಧು ಹೊರಕ್ಕೆ
ಒಡೆನ್ಸಾ, ಅ.19: ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಮಹಿಳೆಯರ ಸಿಂಗಲ್ಸ್ನ ಪ್ರಥಮ ಸುತ್ತಿನಲ್ಲೇ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪಡೆದ ಭಾರತದ ಮಹಿಳಾ ತಾರೆ ಪಿ.ವಿ.ಸಿಂಧು ಸೋತು ನಿರ್ಗಮಿಸಿದ್ದಾರೆ.
ಸಿಂಧು ಅವರು ಚೀನಾದ ಚೆನ್ ಯೂಫೀ ವಿರುದ್ಧ 17-21, 21-23 ಅಂತರದಲ್ಲಿ ಸೋತು ಹೊರ ನಡೆದಿದ್ದಾರೆ.
ಸಿಂಧು ಮತ್ತು ಚೆನ್ ಅವರ ನಡುವಿನ ಹಣಾಹಣಿ ಕೇವಲ 43 ನಿಮಿಷಗಳಲ್ಲಿ ಕೊನೆಗೊಂಡಿತು.
ಕೊರಿಯಾ ಓಪನ್ನಲ್ಲಿ ಪ್ರಶಸ್ತಿ ಜಯಿಸಿದ್ದ ಸಿಂಧು ಅವರು ಕಳೆದ ತಿಂಗಳು ಜಪಾನ್ ಓಪನ್ನಲ್ಲಿ ಎರಡನೆ ಸುತ್ತಿನಲ್ಲಿ ನಿರ್ಗಮಿಸಿದ್ದರು. ಇದೀಗ ಡೆನ್ಮಾರ್ಕ್ ಓಪನ್ನಲ್ಲಿ ಆರಂಭಿಕ ಸುತ್ತಿನಲ್ಲೇ ಸೋತು ಮತ್ತೊಮ್ಮೆ ನಿರಾಶೆಯನ್ನುಂಟು ಮಾಡಿದ್ದಾರೆ.
ಪಂದ್ಯದಲ್ಲಿ ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದ್ದ ಸಿಂಧು ಬಳಿಕ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಲು ವಿಫಲರಾದರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಚೆನ್ ಅವರು ಭಾರತೀಯ ಆಟಗಾರ್ತಿ ವಿರುದ್ಧ ಸೋತಿರುದಕ್ಕೆ ಇದೀಗ ಸೇಡು ತೀರಿಸಿಕೊಂಡಿದ್ದಾರೆ
Next Story