ಸಂಜೆ ಡಿಪ್ಲೋಮಾ: ಪ್ರವೇಶ ಆರಂಭ
ಮಂಗಳೂರು, ಡಿ.12: ಪ್ರಸಕ್ತ ಸಾಲಿಗೆ ಎರಡು ವರ್ಷಗಳ ಐಟಿಐ/ ದ್ವಿತೀಯ ಪಿಯುಸಿ (ವಿಜ್ಞಾನ)/ ದ್ವಿತೀಯ ಪಿಯುಸಿ (ತಾಂತ್ರಿಕ ವಿಷಯಗಳು) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೋಮಾಗೆ ಲ್ಯಾಟರಲ್ ಎಂಟ್ರಿ ಸ್ಕೀಂ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಂಜೆ ಡಿಪ್ಲೋಮಾಗೆ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ಗೆ ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಡಿ.28ರೊಳಗೆ ಅರ್ಜಿಯನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.
ಭರ್ತಿಮಾಡಿದ ಅರ್ಜಿಯನ್ನು ಅರ್ಜಿಶುಲ್ಕ ಮತ್ತು ಸಂಬಂಧಪಟ್ಟ ಮೂಲದಾಖಲೆಗಳೊಂದಿಗೆ ಡಿ.28ರಂದು ಸಂಜೆ 5 ಗಂಟೆಯೊಳಗೆ ಸ್ಪೇಷಲ್ ಆಫೀಸರ್, ಕರ್ನಾಟಕ (ಸರಕಾರಿ) ಸಂಜೆ ಪಾಲಿಟೆಕ್ನಿಕ್, ಮಂಗಳೂರು ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ (ಸರಕಾರಿ) ಪಾಲಿಟೆಕ್ನಿಕ್, ಮಂಗಳೂರು ಕಚೇರಿ ದೂ.ಸಂ.: 0824-2211636ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story