ಬಾಲಿವುಡ್ ನಿರ್ದೇಶಕ ರಾಮ್ ಮುಖರ್ಜಿ ನಿಧನ
ಹೊಸದಿಲ್ಲಿ, ಆ. 22: ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ತಂದೆ, ನಿರ್ದೇಶಕ, ನಿರ್ಮಾಪಕ ರಾಮ್ ಮುಖರ್ಜಿ ಮಂಬೈಯಲ್ಲಿ ರವಿವಾರ ಮುಂಜಾನೆ 4 ಗಂಟೆಗೆ ನಿಧನರಾದರು.
ಅವರು ಕಳೆದ ಕೆಲವು ಕಾಲಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ. ಅವರು ಫಿಲ್ಮಾಲಯ ಸ್ಟುಡಿಯೋದ ಸಹ ಸ್ಥಾಪಕರಾಗಿದ್ದರು. ದಿಲೀಪ್ ಕುಮಾರ್ ಹಾಗೂ ವೈಜಯಂತಿ ಮಾಲ ನಟಿಸಿದ ಹಮ್ ಹಿಂದೂಸ್ತಾನಿ ಹಾಗೂ ಲೀಡರ್ ಚಿತ್ರದ ನಿರ್ದೇಶನ ದಿಂದ ಅವರು ಪ್ರಸಿದ್ಧರಾಗಿದ್ದರು.
ಅವರು ಪತ್ನಿ ಕೃಷ್ಣಾ ಮುಖರ್ಜಿ, ಪುತ್ರಿ ರಾಣಿ ಮುಖರ್ಜಿ ಹಾಗೂ ಪುತ್ರ ರಾಜ ಅವರನ್ನು ಅಗಲಿದ್ದಾರೆ.
Next Story