ಶಿಕ್ಷಣ ತಜ್ಞ ಹಾಗೂ ಕೈಗಾರಿಕೋದ್ಯಮಿ ನವಾಬ್ ಶಾಹ್ ಆಲಂ ಖಾನ್ ನಿಧನ
ಹೈದರಾಬಾದ್,ಅ.23: ಖ್ಯಾತ ಶಿಕ್ಷಣ ತಜ್ಞ ಹಾಗೂ ಕೈಗಾರಿಕೋದ್ಯಮಿ ನವಾಬ್ ಶಾಹ್ ಆಲಂ ಖಾನ್(93) ಅವರು ಸೋಮವಾರ ಬೆಳಗಿನ ಜಾವ ಇಲ್ಲಿ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ನಿಧನರಾದರು.
ಅವರು ಅನ್ವರುಲ್ ಉಲೂಂ ಸಸ್ಥೆಗಳ ಸಮೂಹ,ಐಝಾ ಸ್ಕೂಲ್ನೊಂದಿಗೆ ಗುರುತಿಸಿಕೊಂಡಿದ್ದರು. ನಗರದಲ್ಲಿಯ ಇಂಜಿನಿಯರಿಂಗ್ ಕಾಲೇಜೊಂದಕ್ಕೆ ಅವರ ಹೆಸರನ್ನಿರಿಸಲಾಗಿದೆ.
ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ಅವರು ನಗರದಲ್ಲಿ ವಿವಿಧ ಕಂಪನಿಗಳ ಮಾಲಿಕ ರಾಗಿದ್ದರು. ದಾನಿಯಾಗಿಯೂ ಅವರು ಪ್ರಸಿದ್ಧರಾಗಿದ್ದರು.
ಅವರ ಅಂತ್ಯಸಂಸ್ಕಾರವು ಸಂಜೆ ನೆರವೇರಿತು.
Next Story