ಮಗುವಿಗೆ ಎದೆಹಾಲುಣಿಸುತ್ತಿದ್ದ ಮಹಿಳೆ ಕುಳಿತಿದ್ದರೂ ಕಾರನ್ನು ಎಳೆದೊಯ್ದ ಟ್ರಾಫಿಕ್ ಪೊಲೀಸರು!
ಅನಾರೋಗ್ಯದಿಂದಿದ್ದೇನೆ ಎಂದರೂ ಕಿವಿಗೊಡಲಿಲ್ಲ...
ಮುಂಬೈ, ನ.12: ಏಳು ತಿಂಗಳ ಮಗುವೊಂದಕ್ಕೆ ಎದೆಹಾಲುಣಿಸುತ್ತಿದ್ದ ಮಹಿಳೆಯೊಬ್ಬರು ಕುಳಿತಿದ್ದ ಕಾರನ್ನು ಟ್ರಾಫಿಕ್ ಪೊಲೀಸರು ಎಳೆದೊಯ್ದ ಘಟನೆ ಮುಂಬೈಯಲ್ಲಿ ನಡೆದಿದೆ.
ಈ ಸಂದರ್ಭ ಮಹಿಳೆ ಕಾರಿನೊಳಗಿದ್ದು, ತಾನು ಅನಾರೋಗ್ಯ ಪೀಡಿತಳಾಗಿದ್ದೇನೆ ಎಂದು ವೈದ್ಯಕೀಯ ದಾಖಲೆಗಳನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸಿದ್ದಾರೆ. ಆದರೆ ಇದನ್ನು ಪೊಲೀಸರು ನಿರ್ಲಕ್ಷಿಸಿದ್ದಾರೆ.
ಮಹಿಳೆಯನ್ನು ಜ್ಯೋತಿ ಎಂದು ಗುರುತಿಸಲಾಗಿದ್ದು, ಟ್ರಾಫಿಕ್ ಪೊಲೀಸರು ಕಾರಿನಿಂದ ಕೆಳಗಿಳಿಯುವಂತೆಯೂ ತನ್ನಲ್ಲಿ ಹೇಳಿಲ್ಲ ಎಂದು ಆರೋಪಿಸಿದ್ದಾರೆ.
“ಕಾರನ್ನು ಎಳೆದೊಯ್ಯುವ ಮೊದಲು ಒಂದು ಬಾರಿಯೂ ಕೆಳಗಿಳಿಯುವಂತೆ ಪೊಲೀಸರು ಕೇಳಿಲ್ಲ. ನಾನು ಎದೆಹಾಲುಣಿಸುತ್ತಿದ್ದೇನೆ ಎಂದು ಹೇಳಿದಾಗಲೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ” ಎಂದು ಜ್ಯೋತಿ ಹೇಳಿದ್ದಾರೆ.
ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Car was towed by Traffic Police while the women with her 7 years old baby was sitting in the car.
— Muzzammil Hamidani (@MuzzammilAap) November 11, 2017
(Her FB Live)
Yesterday at SV Rd, Malad.@MumbaiPolice plz look into the matter.@PreetiSMenon @aartic02 @neo_pac @tarsemkpahi @Georgekurian4K @RidlrMUM @smart_mumbaikar pic.twitter.com/ZVPtSYYFdM