ಹೃದಯಾಘಾತದಿಂದ ವಿಮಾನದಲ್ಲೇ ಮೃತಪಟ್ಟ ಪ್ರಯಾಣಿಕ
ಹೊಸದಿಲ್ಲಿ, ನ.23: ವಾರಣಾಸಿ-ಮುಂಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 65ರ ಹರೆಯದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಭವಿಸಿದೆ.
ಐ ಬಿ ತ್ರಿಪಾಠಿ ಎಂಬವರು ಇಂಡಿಗೊ ಏರ್ಲೈನ್ಸ್ನ ಫ್ಲೈಟ್ ಸಂಖ್ಯೆ 6ಇ-711ರಲ್ಲಿ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 10:20ರ ಸುಮಾರಿಗೆ ವಿಮಾನವು ವಾರಣಾಸಿ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಲು ಟೇಕ್ ಆಫ್ ಆಗುತ್ತಿದ್ದಂತೆ ಈ ಘಟನೆ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story