ತಮಿಳುನಾಡು: ಕಡಲ ಕಿನಾರೆಗೆ ಬಂದು ಬೀಳುತ್ತಿವೆ ರಾಶಿ ರಾಶಿ ಡಾಲ್ಫಿನ್ಗಳು !
ತೂತುಕುಡಿ, ನ. 27: ಇಲ್ಲಿನ ಸಮುದ್ರ ಕಿನಾರೆಗೆ ಸೋಮವಾರ ಸಂಜೆ ಬಿದ್ದ ಸುಮಾರು 40ಕ್ಕೂ ಅಧಿಕ ಚುಕ್ಕಿಯುಳ್ಳ ಡಾಲ್ಫಿನ್ಗಳನ್ನು ರಕ್ಷಿಸಲು ಸ್ಥಳೀಯ ಮೀನುಗಾರರು ಹಾಗೂ ಅರಣ್ಯ ಅಧಿಕಾರಿಗಳು ಹಗಲು ರಾತ್ರಿ ಪ್ರಯತ್ನಿಸುತ್ತಿದ್ದಾರೆ.
ಸೋಮವಾರ ಸಂಜೆ ಕಡಲ ಕಿನಾರೆಯಲ್ಲಿ ಚುಕ್ಕಿಯುಳ್ಳ ಡಾಲ್ಫಿನ್ಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದನ್ನು ನಾವು ನೋಡಿದೆವು. ಅವುಗಳನ್ನು ರಕ್ಷಿಸಲು ನಾವು ಪ್ರಯತ್ನಿಸಿದೆವೆ. ಅವುಗಳಲ್ಲಿ 8 ಡಾಲ್ಫಿನ್ಗಳು ಸಾವನ್ನಪ್ಪಿವೆ ಎಂದು ಸ್ಥಳೀಯ ಮೀನುಗಾರರೋರ್ವರು ತಿಳಿಸಿದ್ದಾರೆ.
ಕೆಲವು ಡಾಲ್ಫಿನ್ಗಳು 10ರಿಂದ 15 ಅಡಿ ಉದ್ದವಿದೆ. 8 ಸಾವನ್ನಪ್ಪಿವೆ. 40 ಅಧಿಕ ಡಾಲ್ಫಿನ್ಗಳನ್ನು ನಾವು ಎಳೆದುಕೊಂಡು ಹೋಗಿ ಸಮುದ್ರದಲ್ಲಿ ಬಿಟ್ಟೆವು. ಆದರೆ, ಅವುಗಳಲ್ಲಿ ಹೆಚ್ಚಿನವು ಹಿಂದಕ್ಕೆ ಬಂದಿವೆ ಎಂದು ಮೀನುಗಾರ ಪುನ್ನೈಕಾಯಲ್ ಅವರು ತಿಳಿಸಿದ್ದಾರೆ.
Next Story