ಬಂಡಿಪೊರಾದಲ್ಲಿ ಹಿಮಪಾತ: ಮೂವರು ಸೈನಿಕರು ನಾಪತ್ತೆ
ಹೊಸದಿಲ್ಲಿ, ಡಿ.12: ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ಸಂಭವಿಸಿದ ಹಿಮಪಾತದಿಂದ ಮೂವರು ಸೈನಿಕರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಗಡಿ ನಿಯಂತ್ರಣ ರೇಖೆಯ ಸಮೀಪದ ಬಗ್ಟೋರ್ ಗುರೇಝ್ ಸೆಕ್ಟರ್ ಸಮೀಪ ಹಿಮಪಾತ ಸಂಭವಿಸಿದೆ ಎನ್ನಲಾಗಿದೆ. ಈ ಹಿಂದೆ ಜನವರಿ 26ರಂದು ಬಂಡಿಪೊರಾದಲ್ಲಿ ಸಂಭವಿಸಿದ ಹಿಮಪಾತದಿಂದ 10 ಸೈನಿಕರು ಮೃತಪಟ್ಟು ಹಲವರು ನಾಪತ್ತೆಯಾಗಿದ್ದರು.
ಜಮ್ಮು ಕಾಶ್ಮೀರದ ಬತಾಲಿಕ್ ನಲ್ಲಿ ಎಪ್ರಿಲ್ ನಲ್ಲಿ ಸಂಭವಿಸಿದ ಹಿಮಪಾತದಿಂದ ಮೂವರು ಸೈನಿಕರು ಮೃತಪಟ್ಟಿದ್ದರು.
Next Story