ಗುಜರಾತ್ ಚುನಾವಣೆ: ಗುರುವಾರ 2ನೇ ಹಂತದ ಮತದಾನ
ಅಹ್ಮದಾಬಾದ್, ಡಿ.13: ಹೈವೋಲ್ಟೇಜ್ ಪ್ರಚಾರ ಕಾರ್ಯಕ್ಕೆ ಸಾಕ್ಷಿಯಾಗಿದ್ದ ಗುಜರಾತ್ನಲ್ಲಿ 2ನೇ ಹಂತದ ಮತದಾನಕ್ಕೆ ಗುರುವಾರ ವೇದಿಕೆ ಸಜ್ಜುಗೊಂಡಿದೆ. ಎರಡನೇ ಮತ್ತು ಅಂತಿಮ ಹಂತದ ಮತದಾನದಲ್ಲಿ ಉತ್ತರ ಮತ್ತು ಕೇಂದ್ರ ಗುಜರಾತ್ನ 93 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಒಟ್ಟು 851 ಅಭ್ಯರ್ಥಿಗಳು ಅದೃಷ್ಟ ಪರೀಕ್ಷಿಸಲು ಕಣಕ್ಕಿಳಿದಿದ್ದು 2.22 ಕೋಟಿ ಅರ್ಹ ಮತದಾರರಿದ್ದಾರೆ. ಪ್ರಧಾನಿ ಮೋದಿಗೆ ಇದೊಂದು ಅತ್ಯಂತ ಪ್ರತಿಷ್ಠೆಯ ಚುನಾವಣೆಯಾಗಿದ್ದು ತಮ್ಮ ತವರೂರಿನಲ್ಲಿ ಈ ಬಾರಿ ವಿಪಕ್ಷ ಕಾಂಗ್ರೆಸ್ನಿಂದ ನಿಕಟ ಸ್ಪರ್ಧೆ ಎದುರಿಸುವ ನಿರೀಕ್ಷೆಯಿದೆ. ಪಾಟಿದಾರ್ ಮೀಸಲಾತಿ ಆಂದೋಲನದ ಮುಖ್ಯಸ್ಥ ಹಾರ್ದಿಕ್ ಪಟೇಲ್, ಹಿಂದುಳಿದ ವರ್ಗಗಳ ಮುಖಂಡ ಅಲ್ಪೇಶ್ ಠಾಕೂರ್ ಮತ್ತು ಯುವ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಬೆಂಬಲ ಪಡೆದಿರುವ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಕಳೆದ 2 ದಶಕಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಸೋಲಿನ ರುಚಿ ತೋರಿಸುವ ಉತ್ಸಾಹದಲ್ಲಿದೆ.
Next Story