ಕ್ರಿಕೆಟಿಗ ಅಜಿಂಕ್ಯ ರಹಾನೆ ತಂದೆಯ ಬಂಧನ
ಕೊಲ್ಲಾಪುರ್,ಡಿ.15 : ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್ ಬಾಬುರಾವ್ ರಹಾನೆ ಚಲಾಯಿಸುತ್ತಿದ್ದ ಕಾರು ಇಂದು ಬೆಳಿಗ್ಗೆ 67 ವರ್ಷದ ಮಹಿಳೆಯೊಬ್ಬಳಿಗೆ ಢಿಕ್ಕಿ ಹೊಡೆದು ಆಕೆಯ ಸಾವಿಗೆ ಕಾರಣವಾಗಿದ್ದು, ಮಧುಕರ್ ಅವರನ್ನು ಈ ಸಂಬಂಧ ಬಂಧಿಸಲಾಗಿದೆ. ಅಪಘಾತ ನಡೆದ ಸಂದರ್ಭ ರಹಾನೆ ಕುಟುಂಬದ ಎಲ್ಲಾ ಸದಸ್ಯರೂ ಕಾರಿನಲ್ಲಿದ್ದರು ಎಂದು ಹೇಳಲಾಗಿದೆ.
ಮಧುಕರ್ ಅವರು ಚಲಾಯಿಸುತ್ತಿದ್ದ ಹುಂಡೈ ಐ-20 ಕಾರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಿಗ್ಗೆ 4 ಗಂಟೆ ಹೊತ್ತಿಗೆ ಅತಿ ವೇಗದಲ್ಲಿ ಸಾಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ 67 ವರ್ಷದ ಆಶಾತಾಯಿ ಕಾಂಬ್ಲೆ ಎಂಬವರಿಗೆ ಢಿಕ್ಕಿ ಹೊಡೆದಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಅಲ್ಲಿ ಕೊನೆಯುಸಿರೆಳೆದಿದ್ದಾಳೆ.
Next Story